ಹಾವೇರಿ :ಮತ ಎಣಿಕೆಗೆ ಆಗಮಿಸುತ್ತಿದ್ದ ಇಬ್ಬರು ಕಾರು ಅಪಘಾತದಲ್ಲಿ ಮೃತಪಟ್ಟ ಘಟನೆ ಹಾವೇರಿ ತಾಲೂಕಿನ ಬಸವನಕಟ್ಟಿ ಬಳಿ ನಡೆದಿದೆ. ಬಸವನಕಟ್ಟಿ ಗ್ರಾಮದ ಯುಟಿಪಿ ಕಾಲುವೆಯಲ್ಲಿ ಕಾರು ಉರುಳಿ ಬಿದ್ದಿದೆ. ಮೃತರನ್ನು ಪ್ರಕಾಶ್(40) ಬನ್ನಿಮಟ್ಟಿ ಮತ್ತು ಸಿದ್ದನಗೌಡ ಬಿಷ್ಟನಗೌಡ್ರ (45) ಎಂದು ಗುರುತಿಸಲಾಗಿದೆ.
ಹಾವೇರಿಯಲ್ಲಿ ರಸ್ತೆ ಅಪಘಾತ : ಮತ ಎಣಿಕೆಗೆ ಆಗಮಿಸುತ್ತಿದ್ದ ಇಬ್ಬರ ದುರ್ಮರಣ - ಹಾವೇರಿ ಬಳಿ ಕಾರು ಅಪಘಾತ
ಗ್ರಾಮ ಪಂಚಾಯತ್ ಚುನಾವಣೆ ಮತ ಎಣಿಕೆಗಾಗಿ ಹಾವೇರಿಗೆ ಬರುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ..
![ಹಾವೇರಿಯಲ್ಲಿ ರಸ್ತೆ ಅಪಘಾತ : ಮತ ಎಣಿಕೆಗೆ ಆಗಮಿಸುತ್ತಿದ್ದ ಇಬ್ಬರ ದುರ್ಮರಣ Car Accident in Haveri](https://etvbharatimages.akamaized.net/etvbharat/prod-images/768-512-10054381-331-10054381-1609301041490.jpg)
ಹಾವೇರಿಯಲ್ಲಿ ಅಪಘಾತ
ಓದಿ: ಬೆಳಗಾವಿಯಲ್ಲಿ ಮಹಿಳಾ ಸೆಕ್ಯೂರಿಟಿ ಗಾರ್ಡ್ ಹತ್ಯೆ..
ಈ ಇಬ್ಬರು ಹಾವೇರಿ ತಾಲೂಕು ನೆಗಳೂರು ಗ್ರಾಮ ನಿವಾಸಿಗಳಾಗಿದ್ದಾರೆ. ಪಂಚಾಯತ್ ಚುನಾವಣೆ ಮತ ಎಣಿಕೆಗಾಗಿ ಹಾವೇರಿಗೆ ಬರುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಪ್ರಕಾಶ್ ಅಭ್ಯರ್ಥಿ ಪರ ಏಜೆಂಟ್ ಆಗಿದ್ದು, ಸಿದ್ದನಗೌಡ ಜೊತೆ ಹಾವೇರಿ ಮತ ಎಣಿಕಾ ಕೇಂದ್ರಕ್ಕೆ ಬರುತ್ತಿದ್ದರು ಎನ್ನಲಾಗಿದೆ.
Last Updated : Dec 30, 2020, 10:11 AM IST