ಕರ್ನಾಟಕ

karnataka

ETV Bharat / state

ಹಿರೇಕೆರೂರು ಕಾಲುವೆಯಲ್ಲಿ ಕೊಚ್ಚಿ ಹೋದ ಬಾಲಕನ ಸುಳಿವಿಲ್ಲ, ಮುಂದುವರೆದ ಶೋಧ - Boy floated on canal hirekeruru

ಸೋಮವಾರ ಬೆಳಿಗ್ಗೆ ಹಿರೇಕೆರೂರಿನ ಕಾಲುವೆಯಲ್ಲಿ ಬಿದ್ದ ಬಾಲಕನ ಶವ 24 ಘಂಟೆ ಕಳೆದರೂ ಇನ್ನೂ ಪತ್ತೆಯಾಗಿಲ್ಲ.

ಬಾಲಕನಿಗಾಗಿ ಹುಡುಕಾಟ

By

Published : Oct 22, 2019, 12:52 PM IST

ಹಾವೇರಿ:ಹಿರೇಕೆರೂರಿನಲ್ಲಿ ಸೋಮವಾರ ಮಳೆ ನೀರಿನಲ್ಲಿ ಕೊಚ್ಚಿ ಹೋದ ಬಾಲಕನ ಶವ ಇನ್ನೂ ಪತ್ತೆಯಾಗಿಲ್ಲ.

ಬಾಲಕನ ಮೃತದೇಹದ ಪತ್ತೆ ಕಾರ್ಯ ನಿನ್ನೆ ಬೆಳಿಗ್ಗೆಯಿಂದಲೇ ಆರಂಭವಾಗಿದ್ದು 24 ಗಂಟೆಯಾದರೂ ಯಾವುದೇ ಸುಳಿವು ಸಿಕ್ಕಿಲ್ಲ. ಕಾಲುವೆ ನೀರು ನೋಡಲು ಸ್ನೇಹಿತನ ಜೊತೆ ತೆರಳಿದ್ದ 14 ವರ್ಷದ ಸೋಯಿಬ್ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದಾನೆ.

ಬಾಲಕನಿಗಾಗಿ ಹುಡುಕಾಟ

ಸೋಯಿಬ್ ನೀರಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದಂತೆ ಸ್ಥಳೀಯರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣಾ ಕಾರ್ಯಕ್ಕೆ ಧಾವಿಸಿದ್ದಾರೆ.ಈ ಕಾರ್ಯಾಚರಣೆ ನಿನ್ನೆ ಸಂಜೆವರೆಗೆ ನಡೆದಿದ್ದು, ಇಂದು ಮುಂಜಾನೆಯಿಂದ ಮತ್ತೆ ಶೋಧ ಕಾರ್ಯ ಶುರುವಾಗಿದೆ.

ABOUT THE AUTHOR

...view details