ಕರ್ನಾಟಕ

karnataka

ETV Bharat / state

ಮೋದಿ-ಬಿಎಸ್​ವೈ ಸಾಧನೆಗಳಿಂದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ: ಬಿ.ಸಿ.ಪಾಟೀಲ್ - BC Patil talks about bye election at haveri

ಈ ಹಿಂದೆ ಸಚಿವರು ಬಂದರೆ ಸಾಕು ರೈತ ಮುಖಂಡರು ಮುತ್ತಿಗೆ ಹಾಕುತ್ತಿದ್ದರು. ಆದರೆ ತಾವು ಕೃಷಿ ಸಚಿವನಾದ ನಂತರ ಈ ಪರಿಸ್ಥಿತಿ ಇಲ್ಲ ಎಂದು ಬಿ.ಸಿ.ಪಾಟೀಲ್ ತಿಳಿಸಿದರು.

bc-patil
ಬಿ.ಸಿ.ಪಾಟೀಲ್

By

Published : Oct 18, 2020, 10:05 PM IST

ಹಾವೇರಿ:ಪ್ರಧಾನಿ ನರೇಂದ್ರ ಮೋದಿ, ಸಿ.ಎಂ.ಯಡಿಯೂರಪ್ಪ ಕೋವಿಡ್ ಹಾಗೂ ಪ್ರಕೃತಿ ವಿಕೋಪಗಳನ್ನು ಯಶಸ್ವಿಯಾಗಿ ಎದುರಿಸಿದ್ದಾರೆ. ಅಲ್ಲದೆ ದೇಶವನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ದಿದ್ದಾರೆ. ಹೀಗಾಗಿ, ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.

ಬಿ.ಸಿ.ಪಾಟೀಲ್ ಮಾತನಾಡಿದರು

ನಗರದಲ್ಲಿ ಮಾತನಾಡಿದ ಅವರು, ಈ ಹಿಂದೆ ಸಚಿವರು ಬಂದರೆ ಸಾಕು ರೈತ ಮುಖಂಡರು ಮುತ್ತಿಗೆ ಹಾಕುತ್ತಿದ್ದರು. ಆದರೆ ತಾವು ಕೃಷಿ ಸಚಿವನಾದ ನಂತರ ಈ ಪರಿಸ್ಥಿತಿ ಇಲ್ಲ ಎಂದು ತಿಳಿಸಿದರು.

ನಾನು ಕೃಷಿ ಸಚಿವನಾದ ಮೇಲೆ ರೈತರಿಗೆ ಬರಬೇಕಾಗಿದ್ದ ಪರಿಹಾರ ದೊರಕಿಸಿಕೊಟ್ಟಿದ್ದೇನೆ ಎಂದ ಅವರು, ಮುಂದೆ ಬರುವ ಪರಿಹಾರವನ್ನ ಶೀಘ್ರದಲ್ಲಿ ದೊರಕಿಸಿಕೊಡುವುದಾಗಿ ಭರವಸೆ ನೀಡಿದರು.

ABOUT THE AUTHOR

...view details