ಹಾವೇರಿ:ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಗೆ ಅಕಾಲಿಕ ಮಳೆ ಮತ್ತಷ್ಟು ಹಾನಿ ತಂದಿದೆ. ಪ್ರತಿವರ್ಷ ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಮೆಣಸಿನಕಾಯಿ ಚೀಲಗಳಿಂದ ತುಂಬಿರುತ್ತಿದ್ದ ಮಾರುಕಟ್ಟೆ ಇದೀಗ ಖಾಲಿ ಖಾಲಿಯಾಗಿದೆ.
ಅಕಾಲಿಕ ಮಳೆಯಿಂದ ಮಾರುಕಟ್ಟೆಗೆ ಕಡಿಮೆ ಸಂಖ್ಯೆಯಲ್ಲಿ ಮೆಣಸಿನಕಾಯಿ ಚೀಲಗಳು ಮಾರಾಟಕ್ಕೆ ಬಂದಿವೆ. ಅಕಾಲಿಕ ಮಳೆಯಿಂದ ಕಡಿಮೆ ಮಳೆಯಲ್ಲಿ ಬೆಳೆಯುತ್ತಿದ್ದ ಕೆಂಪು ಮೆಣಸಿನಕಾಯಿ ಬೆಳೆ ಜಮೀನಿನಲ್ಲೇ ಹಾಳಾಗಿದೆ. ಅಳಿದುಳಿದ ಮೆಣಸಿನಕಾಯಿಗೂ ಫಂಗಸ್ ಆವರಿಸಿದೆ.
ಪ್ರತಿವರ್ಷ ಮಾರುಕಟ್ಟೆಗೆ ನವಂಬರ್ ತಿಂಗಳಲ್ಲಿ ಒಂದು ಲಕ್ಷ ಚೀಲಕ್ಕೂ ಅಧಿಕ ಸಂಖ್ಯೆಯಲ್ಲಿ ಮೆಣಸಿನಕಾಯಿ ಬರುತ್ತಿತ್ತು. ಆದರೆ ಈ ವರ್ಷ ಕೇವಲ 25 ಸಾವಿರದಷ್ಟ ಮೆಣಸಿನಕಾಯಿ ಚೀಲಗಳು ಮಾರುಕಟ್ಟೆಗೆ ಬಂದಿವೆ. ಕ್ವಿಂಟಾಲ್ಗೆ ಸುಮಾರು 5 ಸಾವಿರದಿಂದ 25 ಸಾವಿರ ರೂಪಾಯಿ ಸರಾಸರಿ ದರದಲ್ಲಿ ಮಾರಾಟವಾಗುತ್ತಿದ್ದ ಮೆಣಸಿನಕಾಯಿ ಈಗ 800 ರೂ.ಗಳಿಂದ 2500 ರೂಪಾಯಿವರೆಗೆ ಮಾರಾಟವಾಗುತ್ತಿದೆ.