ಹಾವೇರಿ : ಶರಾವತಿ ನೀರನ್ನ ಬೆಂಗಳೂರಿಗೆ ಒಯ್ಯುವುದು ಕಾರ್ಯಸಾಧುವಲ್ಲ ಮತ್ತು ಸಮಂಜಸ ಅಲ್ಲ ಎಂದು ಮಾಜಿ ಸಚಿವ ಬಸವರಾಜ್ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ.
ಶರಾವತಿ ನೀರನ್ನ ಬೆಂಗಳೂರಿಗೆ ಒಯ್ಯುವುದು ಸಮಂಜಸ ಅಲ್ಲ: ಬಸವರಾಜ್ ಬೊಮ್ಮಾಯಿ - kannada news
ಶರಾವತಿ ನೀರನ್ನು ಬೆಂಗಳೂರಿಗೆ ಒಯ್ಯುವುದನ್ನು ಮಾಜಿ ಸಚಿವ ಬಸವರಾಜ್ ಬೊಮ್ಮಾಯಿ ವಿರೋಧಿಸಿದ್ದಾರೆ. ಈ ಯೋಜನೆ ಸಮಂಜಸ ಅಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು ಪ್ರಸ್ತುತ ತಂತ್ರಜ್ಞಾನದಲ್ಲಿ ಎಲ್ಲೇ ಇರುವ ನೀರನ್ನ ಎಲ್ಲಿಗೆ ಬೇಕಾದರು ಒಯ್ಯಬಹುದು. ಆದರೆ ಅದರಿಂದಾಗಿ ಪರಿಸರ ಮೇಲೆ ಆಗುವ ಸಾಧಕ ಬಾಧಕಗಳನ್ನು ನೋಡಬೇಕಾಗುತ್ತದೆ. ಈ ದೃಷ್ಠಿಯಲ್ಲಿ ಈ ಯೋಜನೆ ಸಮಂಜಸವು ಅಲ್ಲ ಎಂದು ಬೊಮ್ಮಾಯಿ ತಿಳಿಸಿದರು.
ಇದೇ ವೇಳೆ ಮಧ್ಯಂತರ ಚುನಾವಣೆ ಬಗ್ಗೆ ಪಕ್ಷದಲ್ಲಿ ಒಲುವಿಲ್ಲಾ. ಆದ್ರೆ ಯಾವುದೇ ಚುನಾವಣೆ ಬಂದರೂ ಎದರಿಸುವುದು ಅನಿವಾರ್ಯ ಎಂದು ಬೊಮ್ಮಯಿ ತಿಳಿಸಿದರು. ಈಗ ಆಪರೇಷನ್ ಕಮಲ ಶಿಫ್ಟ್ ಆಗಿದೆ. ಮೈತ್ರಿ ಸರ್ಕಾರದಲ್ಲಿ ಆಪರೇಷನ್ ನಡೆದಿದೆ. ಆಪರೇಷನ್ ಸಿದ್ದರಾಮಯ್ಯ ನಡೆದಿದ್ದು ಇದರ ಪ್ರತಿಫಲಗಳೇನಾಗುತ್ತೆ ಎಂಬುದನ್ನು ಕಾದು ನೋಡೋಣ ಎಂದು ಬೊಮ್ಮಾಯಿ ತಿಳಿಸಿದರು.