ಕರ್ನಾಟಕ

karnataka

ETV Bharat / state

ತಗ್ಗಿದ ಪ್ರವಾಹ: ಹಾವೇರಿಯಲ್ಲಿ ಸೇತುವೆಗಳು ಸಂಚಾರಕ್ಕೆ ಮುಕ್ತ

ಜಿಲ್ಲೆಯಲ್ಲಿ ಮಳೆ ಆರ್ಭಟ ತಗ್ಗಿದ್ದು ನದಿಗಳಲ್ಲಿ ನೀರಿನ ಪ್ರವಾಹವೂ ಕಡಿಮೆಯಾಗುತ್ತಿದೆ. ಹೀಗಾಗಿ ಸೇತುವೆಗಳ ಮೇಲಿನ ನೀರು ಕಡಿಮೆಯಾಗಿ ಜನರ ಓಡಾಟ‌‌ ಆರಂಭವಾಗಿದೆ.

Bridges are opened for traffic in Haveri
ಸೇತುವೆಗಳು ಸಂಚಾರಕ್ಕೆ ಮುಕ್ತ

By

Published : Jul 19, 2022, 11:39 AM IST

ಹಾವೇರಿ:ಜಿಲ್ಲೆಯಾದ್ಯಂತ ಮಳೆ ಅಬ್ಬರ ಕಡಿಮೆಯಾಗಿದ್ದು ವರದಾ, ತುಂಗಭದ್ರಾ, ಧರ್ಮಾ, ಕುಮುದ್ವತಿ ನದಿಗಳಲ್ಲಿ ನೀರಿನ‌‌ ಪ್ರಮಾಣವೂ ತಗ್ಗುತ್ತಿದೆ.‌ ಹೀಗಾಗಿ ಸೇತುವೆಗಳು ಜನ, ವಾಹನ ಸಂಚಾರಕ್ಕೆ ಮುಕ್ತವಾಗುತ್ತಿವೆ. ರಟ್ಟಿಹಳ್ಳಿ ತಾಲೂಕಿನ ಯಲಿವಾಳ-ಚಪ್ಪರದಹಳ್ಳಿ ಸೇತುವೆ ಮೇಲಿನ ನೀರು ಇಳಿದಿದ್ದು, ಜನರ ಓಡಾಟ‌‌ ಶುರುವಾಗಿದೆ. ಸೇತುವೆ ಮೇಲೆ ಕುಮುದ್ವತಿ ನದಿ ನೀರು ಭರಪೂರ ಹರಿಯುತ್ತಿದ್ದುದರಿಂದ ಸಂಚಾರ ಬಂದ್ ಆಗಿತ್ತು. ಸವಣೂರು ತಾಲೂಕಿನ ಕಲಕೋಟಿ-ಕರ್ಜಗಿ ಸೇತುವೆ ಮೇಲಿನ ನೀರು ಕೂಡಾ ಕಡಿಮೆಯಾಗಿದ್ದು ಸಂಚಾರಕ್ಕೆ ತೆರೆದುಕೊಂಡಿದೆ.


ABOUT THE AUTHOR

...view details