ಹಾವೇರಿ:ಜಿಲ್ಲೆಯಲ್ಲಿ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಪ್ರತ್ಯೇಕ ಘಟನೆಗಳು ಜರುಗಿವೆ.
ಹಾವೇರಿ: ಇಬ್ಬರು ಬಾಲಕರು ನೀರುಪಾಲು - boy death in ijarilakamapura
ಇಬ್ಬರು ಬಾಲಕರು ನೀರುಪಾಲಾದ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಹಸುಗಳಿಗೆ ನೀರು ಕುಡಿಸಲು ಹೋಗಿದ್ದ ಬಾಲಕ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ರೆ, ಮತ್ತೊಬ್ಬ ಬಾಲಕ ಸ್ನೇಹಿತರ ಜೊತೆ ಆಟವಾಡಲು ಹೋಗಿದ್ದಾಗ ಗುಂಡಿಯಲ್ಲಿ ಬಿದ್ದು ಸಾವನ್ನಪ್ಪಿದ್ದಾನೆ.

ಶಿಗ್ಗಾವಿ ತಾಲೂಕಿನ ಮುಗಳಿ ಗ್ರಾಮದ 14 ವರ್ಷ ಪರಮೇಶ್ವರಯ್ಯ ಕಂಬಾಳಿಮಠ ಮಧ್ಯಾಹ್ನ ದನಗಳಿಗೆ ನೀರು ಕುಡಿಸಲು ಹೋಗಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾನೆ. ಈ ಘಟನೆ ಶಿಗ್ಗಾವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇನ್ನು ಆಟವಾಡಲು ತೆರಳಿದ್ದ ಏಳು ವರ್ಷದ ಬಾಲಕ ಹೊಂಡದಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಹಾವೇರಿ ಸಮೀಪದ ಇಜಾರಿಲಕಮಾಪುರದಲ್ಲಿ ನಡೆದಿದೆ. ಮೃತ ಬಾಲಕನನ್ನ ಅಝದ್ ಹಮ್ಮಗಿ ಎಂದು ಗುರುತಿಸಲಾಗಿದೆ. ಮೂವರು ಗೆಳೆಯರು ಸೇರಿಕೊಂಡು ಆಟವಾಡಲು ತೆರಳಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಸ್ಥಳೀಯರು ಬಾಲಕನ ಮೃತದೇಹವನ್ನು ಹೊರ ತಗೆದಿದ್ದಾರೆ. ಹಾವೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.