ಕರ್ನಾಟಕ

karnataka

ETV Bharat / state

ಬುದ್ದಿಮಾಂದ್ಯ ಮಕ್ಕಳ ಜೊತೆ ಬರ್ತ್​ ಡೇ ಆಚರಿಸಿಕೊಂಡ ಬೊಮ್ಮಾಯಿ - Latest News For Home minister Bommayi

ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಮ್ಮ 60 ನೇ  ಜನ್ಮದಿನವನ್ನು ಹಾವೇರಿ ಜಿಲ್ಲೆಯ ಜ್ಯೋತಿ ಬುದ್ದಿಮಾಂದ್ಯ ಮಕ್ಕಳ ವಸತಿ ಶಾಲೆಯಲ್ಲಿ ಆಚರಿಸಿಕೊಂಡಿದ್ದಾರೆ.

bommayi-birthday-celebration
ಬುದ್ದಿಮಾಂದ್ಯ ಮಕ್ಕಳ ಜೊತೆ ಬರ್ತ್​ ಡೇ ಆಚರಿಸಿಕೊಂಡ ಬೊಮ್ಮಾಯಿ

By

Published : Jan 28, 2020, 6:38 PM IST

ಹಾವೇರಿ : ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಮ್ಮ 60 ನೇ ಜನ್ಮದಿನವನ್ನು ಜಿಲ್ಲೆಯ ಜ್ಯೋತಿ ಬುದ್ದಿಮಾಂದ್ಯ ಮಕ್ಕಳ ವಸತಿ ಶಾಲೆಯಲ್ಲಿ ಆಚರಿಸಿಕೊಂಡಿದ್ದಾರೆ.

ಬೊಮ್ಮಾಯಿ ಶಾಲೆಗೆ ಬರುತ್ತಿದ್ದಂತೆ ಗುಲಾಬಿ ಹಿಡಿದ ಮಕ್ಕಳು ಹುಟ್ಟುಹಬ್ಬದ ಶುಭಾಶಯ ಕೋರಿದರು. ಈ ಸಂದರ್ಭದಲ್ಲಿ ಬೊಮ್ಮಾಯಿ ಭಾವುಕರಾದ ಘಟನೆ ಕೂಡ ನಡೆಯಿತು. ಮಕ್ಕಳ ಶುಭಾಶಯ ಸ್ವೀಕರಿಸಿದ ಬೊಮ್ಮಾಯಿ, ಮಕ್ಕಳಿಗೆ ಧನ್ಯವಾದ ಹೇಳಿ, ಮಕ್ಕಳಿಗೆ ಕೇಕ್ ತಿನ್ನಿಸಿ, ಬಟ್ಟೆ ವಿತರಣೆ ಮಾಡಿದರು. ಬಳಿಕ, ತಮ್ಮ ತಂದೆ ಎಸ್.ಆರ್ ಬೊಮ್ಮಾಯಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ನಂತರ ಮಾತನಾಡಿದ ಅವರು, ಮಕ್ಕಳ ಜೊತೆ ಜನ್ಮದಿನ ಆಚರಿಸಿಕೊಳ್ಳುತ್ತಿರುವುದು ಸ್ಮರಣೀಯ, ತಮಗೆ 60 ವರ್ಷವಾಯಿತು. ಇದು ಎಲ್ಲ ಅಂಕಿಗಳಂತೆ ಒಂದು ಅಂಕೆ. 60 ಆದರೂ ಸಹ ತಾವು ಚೈತನ್ಯ ಕಳೆದುಕೊಂಡಿಲ್ಲ ಎಂದರು. ಮಾನವನಲ್ಲಿ ಮಾನವೀಯತೆ ಇದೆಯೋ ಇಲ್ಲವೋ ಪರೀಕ್ಷಿಸಲು ದೇವರು ಇಂತಹ ಮಕ್ಕಳನ್ನು ಸೃಷ್ಛಿಸುತ್ತಾನೆ ಎಂದು ಬೇಸರ ವ್ಯಕ್ತಪಡಿಸಿದರು.

ಬುದ್ದಿಮಾಂದ್ಯ ಮಕ್ಕಳ ಜೊತೆ ಬರ್ತ್​ ಡೇ ಆಚರಿಸಿಕೊಂಡ ಬೊಮ್ಮಾಯಿ

ABOUT THE AUTHOR

...view details