ಕರ್ನಾಟಕ

karnataka

ETV Bharat / state

ಈ ಒಂದ್‌ ಸಣ್ಣ ಹಳ್ಳಿಯೊಳಗೆ 600ಕ್ಕೂ ಹೆಚ್ಚು ರಕ್ತದಾನಿಗಳು.. ಇದು ಸ್ನೇಹಮೈತ್ರಿ ಬ್ಲಡ್ ಆರ್ಮಿ ಗ್ರೂಪ್​.. - ಸ್ನೇಹಮೈತ್ರಿ ಬ್ಲಡ್ ಆರ್ಮಿ ಗ್ರೂಪ್​

ಪ್ರತಿ ತಿಂಗಳು ರಕ್ತ ಬೇಕಾಗುವ ರೋಗಿಗಳಿಗೆ ಈ ಗ್ರೂಪ್​ ಸದಸ್ಯರು ರಕ್ತ ಪೂರೈಸುತ್ತಾರೆ. ರಾಜ್ಯ ಅಲ್ಲದೇ ಅವಶ್ಯಕತೆ ಬಿದ್ದಾಗ ಗೋವಾಕ್ಕೂ ತೆರಳಿ ರಕ್ತದಾನ ಮಾಡಿದ ಖ್ಯಾತಿ ಇಲ್ಲಿಯ ರಕ್ತದಾನಿಗಳದ್ದಾಗಿದೆ. ಪ್ರತಿ ಮೂರು ತಿಂಗಳಿಗೊಮ್ಮ ರಕ್ತದಾನ ಮಾಡುವ ನಿಯಮಿತ ರಕ್ತದಾನಿಗಳು ಸಹ ಇಲ್ಲಿದ್ದಾರೆ..

Blood donation service by Haveri sneha maitri blood army group
ಸ್ನೇಹಮೈತ್ರಿ ಬ್ಲಡ್ ಆರ್ಮಿ ಗ್ರೂಪ್​ ವತಿಯಿಂದ ರಕ್ತದಾನ

By

Published : Jan 14, 2022, 4:08 PM IST

Updated : Jan 14, 2022, 4:35 PM IST

ಹಾವೇರಿ: ಜೀವ ಉಳಿಸಲು ಸಹಕಾರಿಯಾಗುವ ರಕ್ತದಾನ ಶ್ರೇಷ್ಠದಾನ ಎಂಬ ಮಾತಿದೆ. ಹಾನಗಲ್ ತಾಲೂಕಿನ ಅಕ್ಕಿ ಆಲೂರು ಗ್ರಾಮ ಇದೀಗ ರಕ್ತದಾನದಿಂದ ಗಮನ ಸೆಳೆಯುತ್ತಿದೆ.

ಈ ಊರಿನಲ್ಲಿ ಸುಮಾರು 600ಕ್ಕೂ ಅಧಿಕ ರಕ್ತದಾನಿಗಳಿದ್ದಾರೆ. ಪೊಲೀಸ್ ಕಾನ್ಸ್​​ಟೇಬಲ್​​ ಕರಿಬಸಪ್ಪ ಗೊಂದಿ ನೇತೃತ್ವದಲ್ಲಿ ಸ್ಥಾಪಿತವಾದ ಸ್ನೇಹಮೈತ್ರಿ ಗ್ರೂಪ್​ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ರಕ್ತದಾನ ಕ್ಯಾಂಪ್ ಮಾಡಿದ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ವಿದ್ಯಾರ್ಥಿಗಳು, ಯುವಕರು, ವರ್ತಕರು, ಗೃಹರಕ್ಷಕ ದಳ, ಸರ್ಕಾರದ ವಿವಿಧ ಇಲಾಖೆಯ ನೌಕರರು ಸೇರಿ ಹೆಚ್ಚಿನವರು ಈ ತಂಡಕ್ಕೆ ಸೇರಿದ್ದಾರೆ. ಹೆರಿಗೆ ಸಮಯದಲ್ಲಿ, ಅಪಘಾತ ಸಮಯದಲ್ಲಿ ರಕ್ತ ಬೇಕು ಅಂದರೆ ಸಾಕು ಈ ತಂಡದ ಸದಸ್ಯರು ರಕ್ತದಾನ ಮಾಡಲು ಮುಂದಿರುತ್ತಾರೆ.

ಸ್ನೇಹಮೈತ್ರಿ ಬ್ಲಡ್ ಆರ್ಮಿ ಗ್ರೂಪ್​ ವತಿಯಿಂದ ರಕ್ತದಾನ

ಪ್ರತಿ ತಿಂಗಳು ರಕ್ತ ಬೇಕಾಗುವ ರೋಗಿಗಳಿಗೆ ಈ ಗ್ರೂಪ್​ ಸದಸ್ಯರು ರಕ್ತ ಪೂರೈಸುತ್ತಾರೆ. ರಾಜ್ಯ ಅಲ್ಲದೇ ಅವಶ್ಯಕತೆ ಬಿದ್ದಾಗ ಗೋವಾಕ್ಕೂ ತೆರಳಿ ರಕ್ತದಾನ ಮಾಡಿದ ಖ್ಯಾತಿ ಇಲ್ಲಿಯ ರಕ್ತದಾನಿಗಳದ್ದಾಗಿದೆ. ಪ್ರತಿ ಮೂರು ತಿಂಗಳಿಗೊಮ್ಮ ರಕ್ತದಾನ ಮಾಡುವ ನಿಯಮಿತ ರಕ್ತದಾನಿಗಳು ಸಹ ಇಲ್ಲಿದ್ದಾರೆ.

ರಕ್ತ ಭಂಡಾರಗಳಿಗೆ ಈ ತಂಡದ ಸದಸ್ಯರು ಪ್ರತಿ ಮೂರು ತಿಂಗಳಿಗೊಮ್ಮ ರಕ್ತದಾನ ಮಾಡುತ್ತಾರೆ. ಈ ರೀತಿ ಇಲ್ಲಿ 50 ಬಾರಿ ರಕ್ತದಾನ ಮಾಡಿದ ರಕ್ತದಾನಿಗಳು ಸಹ ಇದ್ದಾರೆ. ರಕ್ತದಾನಕ್ಕೆ ಸ್ನೇಹ ಮೈತ್ರಿ ಬ್ಲಡ್ ಆರ್ಮಿ ಗ್ರೂಪ್​ ಪ್ರೋತ್ಸಾಹಿಸುತ್ತದೆ.

ಅಲ್ಲದೇ, ಸಾರಿಗೆ ಇಲಾಖೆಯ ಸಹಕಾರದೊಂದಿಗೆ ರಕ್ತದಾನ ರಥ ಸಹ ರಚಿಸಲಾಗಿದೆ. ಈ ವಾಹನದಲ್ಲಿ ರಕ್ತದಾನದ ಕುರಿತ ಎಲ್ಲ ವಿವರಗಳಿವೆ. ರಕ್ತದಾನ ಜೊತೆಗೆ ನೇತ್ರದಾನ, ಅಂಗಾಂಗ ದಾನದ ಕುರಿತಂತೆ ಸಹ ಈ ತಂಡ ಅರಿವು ಮೂಡಿಸುತ್ತಿದೆ.

'ದ ಹೋಂ ಟೌನ್ ಆಫ್​ ಬ್ಲಡ್ ಡೊನೇಟರ್' :ಈ ಗ್ರೂಪ್‌ನ ಕಾರ್ಯವೈಖರಿ ಗುರುತಿಸಿರುವ ಗೂಗಲ್ ಸಂಸ್ಥೆ ಅಕ್ಕಿ ಆಲೂರು ಗ್ರಾಮಕ್ಕೆ 'ದ ಹೋಂ ಟೌನ್ ಆಫ್​ ಬ್ಲಡ್ ಡೊನೇಟರ್' ಎಂಬ ಹೆಸರು ನೀಡಿದೆ. ಇದರಿಂದ ಉತ್ತೇಜಿತರಾಗಿರುವ ಸ್ನೇಹಮೈತ್ರಿ ಬ್ಲಡ್ ಆರ್ಮಿ ಇದೀಗ ಗ್ರಾಮದ ಆರಂಭ ಮತ್ತು ಅಂತ್ಯದ ರಸ್ತೆಗಳಲ್ಲಿ ರಕ್ತದಾನಿಗಳ ತವರೂರು ಅಕ್ಕಿ ಆಲೂರು ಎಂಬ ನಾಮಫಲಕ ಹಾಕಿದೆ.

ಇದನ್ನೂ ಓದಿ:ರಾಮನಗರದಿಂದಲೇ ಇನ್ನು ಹತ್ತು ಬಾರಿ ಪಾದಯಾತ್ರೆ ಬರಲಿ.. ಅಂತಾರಾಜ್ಯ ನದಿ ವಿವಾದ ಹೋರಾಟದಿಂದ ಗೆಲ್ಲಲಾಗಲ್ಲ.. HDD

ನಾಮಫಲಕದಲ್ಲಿ ರಕ್ತದಾನ ಮಾಡಲು ಸದಾ ನಾವು ಸನ್ನದ್ಧರಾಗಿದ್ದೇವೆ. ನಾವು ರಕ್ತದಾನ ಮಾಡುವ ಮೂಲಕ ಜೀವದಾನ ಮಾಡುತ್ತೇವೆ. ನೀವು ಜೀವದಾನಕ್ಕೆ ರೆಡಿನಾ, ನಾನು ರಕ್ತ ಸೈನಿಕ ನೀವು ಎಂಬ ಶrರ್ಷಿಕೆ ಮತ್ತು ಅಡಿಬರಹಗಳು ಆಕರ್ಷಕವಾಗಿದ್ದು ರಕ್ತದಾನಕ್ಕೆ ಉತ್ತೇಜಿಸುತ್ತಿವೆ.

Last Updated : Jan 14, 2022, 4:35 PM IST

ABOUT THE AUTHOR

...view details