ಹಾವೇರಿ:ಕೊರೊನಾ ಬಿಕ್ಕಟ್ಟಿನ ಹಿನ್ನೆಲೆ ರಕ್ತದಾನಿಗಳ ಕೊರತೆ ಎದ್ದು ಕಾಣ್ತಿದೆ. ಈ ಹಿನ್ನೆಲೆ ಕೊರೊನಾ ವಾರಿಯರ್ಸ್ ಆದ ಪೊಲೀಸರೇ ಜಿಲ್ಲೆಯಲ್ಲಿ ರಕ್ತದಾನ ಮಾಡಲು ಮುಂದಾಗಿದ್ದಾರೆ.
ರಕ್ತದಾನಿಗಳ ಕೊರತೆ: ಪೊಲೀಸರಿಂದಲೇ ರಕ್ತದಾನ! - haveri police blood donate camp
ಹೆಮ್ಮಾರಿ ಕೊರೊನಾದ ಸಂಕಷ್ಟದ ಈ ಸಮಯದಲ್ಲಿ ರಕ್ತ ದಾನಿಗಳ ಕೊರತೆ ಕಾಡ್ತಿದೆ. ಅಂಥಾದ್ರಲ್ಲಿ ಕೊರೊನಾ ವಾರಿಯರ್ಸ್ ಆಗಿ ಕೆಲಸ ಮಾಡ್ತಿರೋ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಆಡೂರು ಠಾಣೆಯ ಪೊಲೀಸರು ರಕ್ತದಾನ ಮಾಡಿದ್ರು.
ಪೊಲೀಸರಿಂದ ರಕ್ತದಾನ
ಪೊಲೀಸ್ ಠಾಣೆಯ 24 ಜನರು ರಕ್ತದಾನ ಮಾಡಿ ರಕ್ತದ ಕೊರತೆ ಎದುರಿಸ್ತಿರೋ ಜನರ ನೋವಿಗೆ ಸ್ಪಂದಿಸೋ ಪ್ರಯತ್ನ ಮಾಡಿದ್ದಾರೆ. ಅಕ್ಕಿಆಲೂರಿನ ಸ್ನೇಹಮೈತ್ರಿ ಬ್ಲಡ್ ಆರ್ಮಿ ನೇತೃತ್ವದಲ್ಲಿ ಪೊಲೀಸ್ ಠಾಣೆಯಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಪೊಲೀಸರು ರಕ್ತದಾನ ಮಾಡಿದ್ರು.