ಕರ್ನಾಟಕ

karnataka

ETV Bharat / state

ಶಿವಾಜಿ ನಗರದಲ್ಲಿ ಈ ಬಾರಿ ಬಿಜೆಪಿ ಗೆಲವು ನಿಶ್ಚಿತ: ಸಚಿವ ಜಗದೀಶ್ ಶೆಟ್ಟರ್ - ಸಚಿವ ಜಗದೀಶ್ ಶೆಟ್ಟರ್ ಭವಿಷ್ಯ

ಶಿವಾಜಿನಗರ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಗೆಲ್ಲುವುದು ನಿಶ್ಚಿತ ಎಂದು ಸಚಿವ ಜಗದೀಶ್ ಶೆಟ್ಟರ್ ಭವಿಷ್ಯ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಲ್ಲಿ ಭವಿಷ್ಯ ನುಡಿದ್ದಾರೆ.

Jagadish Shettar
ಶಿವಾಜಿ ನಗರದಲ್ಲಿ ಈ ಬಾರಿ ಬಿಜೆಪಿ ಗೆಲವು ನಿಶ್ಚಿತ

By

Published : Nov 27, 2019, 2:16 PM IST

ರಾಣೆಬೆನ್ನೂರು:ರಾಜ್ಯದಲ್ಲಿ ಉಪಚುನಾವಣೆ ನಡೆಯುತ್ತಿರುವ ಎಲ್ಲಾ ಕ್ಷೇತ್ರಗಳಿಗೆ ಭೇಟಿ ನೀಡಿದ್ದೆನೆ. ಅದರಲ್ಲೂ ವಿಶೇಷವಾಗಿ ಶಿವಾಜಿನಗರ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಗೆಲ್ಲುವುದು ನಿಶ್ಚಿತ ಎಂದು ಸಚಿವ ಜಗದೀಶ್ ಶೆಟ್ಟರ್ ಭವಿಷ್ಯ ನುಡಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಮೈತ್ರಿ ಸರ್ಕಾರವು ಜನವಿರೋಧಿ ಸರ್ಕಾರವಾಗಿತ್ತು. ಈಗ ಜನ ಅವರಿಬ್ಬರನ್ನು ತಿರಸ್ಕರಿಸಿ, ಬಿಜೆಪಿ ಬೆಂಬಲಿಸುತ್ತಿದ್ದಾರೆ ಎಂದರು.

ಶಿವಾಜಿ ನಗರದಲ್ಲಿ ಈ ಬಾರಿ ಬಿಜೆಪಿ ಗೆಲವು ನಿಶ್ಚಿತ

17 ಜನ ಶಾಸಕರು ಮೈತ್ರಿ ಸರ್ಕಾರದ ರಗಳೆ ನೋಡಿ ರಾಜೀನಾಮೆ ನೀಡಿದರು. ಈಗ ಸಿದ್ದರಾಮಯ್ಯ ಒಬ್ಬಂಟಿಯಾಗಿ ಕೆಲ ನಾಯಕರ ಪರವಾಗಿ ನೆಪ ಮಾತ್ರಕ್ಕೆ ಪ್ರಚಾರ ಮಾಡುತ್ತಿದ್ದಾರೆ.ಸಿದ್ದರಾಮಯ್ಯ ಅವರಿಗೆ ಈ ಉಪಚುನಾವಣೆಯಲ್ಲಿ ಸೋಲುವುದು ಗೊತ್ತಾಗಿದೆ. ಈಗಾಗಲೇ ಕಾಂಗ್ರೆಸ್ ಹೈಕಮಾಂಡಗಿಗೆ ಸೋಲಿಗೆ ನಾನು ಜವಾಬ್ದಾರನಲ್ಲ ಎಂದು ಮಾಹಿತಿ ನೀಡಿದ್ದಾರೆ.

ABOUT THE AUTHOR

...view details