ಹಾವೇರಿ:ರಾಜ್ಯದಲ್ಲಿ 224 ಕ್ಷೇತ್ರಗಳಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಜರುಗಿದ್ದು, ಅದು ಮಾರ್ಚ್ 25 ರಂದು ದಾವಣಗೆರೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮಹಾ ಸಂಗಮಗೊಳ್ಳಲಿದೆ. ಅಂದು ವಿರೂಟ್ ಸ್ವರೂಪದ ದರ್ಶನ ಸಮಾವೇಶದಲ್ಲಿ ಆಗಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಹೇಳಿದರು.
ಹಾವೇರಿ ಜಿಲ್ಲೆ ಶಿಗ್ಗಾಂವಿ ಹಮ್ಮಿಕೊಂಡಿದ್ದ ಬಿಜೆಪಿ ಜನಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಳ್ಳುವ ಮುನ್ನ ಅವರು ಮಾತನಾಡಿದರು.ಮಧ್ಯ ಕರ್ನಾಟಕದಲ್ಲಿ ನಡೆಯಲಿರುವ ಬಿಜೆಪಿ ಮಹಾಸಂಗಮ ಸಮಾವೇಶದಲ್ಲಿ ಲಕ್ಷಾಂತರ ಜನರು ಸೇರಲಿದ್ದಾರೆ. ಜನ ಸಂಕಲ್ಪ ಯಾತ್ರೆಯಲ್ಲಿ ನಮ್ಮ ರೀತಿ, ನೇತೃತ್ವ, ಜನರಿಗೆ ಇರುವ ನಿಯತ್ತು, ಡಬಲ್ ಎಂಜಿನ್ ಸರ್ಕಾರ ದೇಶ ಹಾಗೂ ಕರ್ನಾಟಕಕ್ಕೆ ಜನಪಯೋಗಿ ಕೆಲಸ ಮಾಡಿದೆ ಎನ್ನು ರೀಪೋರ್ಟ್ ಕಾರ್ಡ್ ನೀಡಿದ್ದೇವೆ. ದೇಶ ಮೊದಲು ಎನ್ನುವುದು ಬಿಜೆಪಿ ತತ್ವವಾಗಿದೆ ಎಂದು ತಿಳಿಸಿದರು.
ಮಾಜಿ ಸಿಎಂ ಬಿಎಸ್ ವೈ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಅವರ ಆಡಳಿತದಲ್ಲಿ ನಡೆದ ಅಭಿವೃದ್ಧಿ ಸಾಧನೆ ಜನರ ಮುಂದಿಟ್ಟು ವೋಟು ಕೇಳುತ್ತೇವೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದವರದ್ದು ಅಧಿಕಾರ, ಜಾತಿ ಹಾಗೂ ಕುಟುಂಬ ಮೊದಲು ಎನ್ನುವ ನೀತಿ ಎಂದು ಆರೋಪಿಸಿದರು.
ಅರ್ಹರಿಗೆ ಸರ್ಕಾರದ ಯೋಜನೆ ಸಿಗುವಂತೆ ಆಡಳಿತ ನೀಡಿದ್ದೇವೆ. ಹಿಂದೆ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಯೋಜನೆಗಳನ್ನು ಜಾರಿಗೆ ತಂದಿತ್ತೂ,ಆದರೆ ಅವು ಜಾತಿ ಕೇಂದ್ರಿತ ಆಗಿದ್ದವು. ಕಾಂಗ್ರೆಸ್ನವರಿಗೆ ಜಿಲೇಬಿ ಅಲರ್ಜಿ ಇತ್ತು. ಜಿಲೇಬಿ ಎಂದರೆ ಏನೂ ನಿಮಗೆ ಗೊತ್ತಿದೆ ಎಂದ ಅವರು, ಬಿಜೆಪಿ ನೇತೃತ್ವ ಇರುವ ಕೇಂದ್ರದಲ್ಲಿ ಪ್ರಧಾನಿ,ರಾಜ್ಯದಲ್ಲಿ ಬಿಎಸ್ವೈ,ಬಸವರಾಜ ಬೊಮ್ಮಾಯಿ ನೇತಾರರು. ಜನಮನ್ನಣೆ ಪಡೆದಿರುವಂತ ನೇತೃತ್ವ ನಮ್ಮದು ಎಂದು ಹೇಳಿದರು.