ಹಾವೇರಿ:ಪಿಎಸ್ಐ ಪರೀಕ್ಷಾ ನೇಮಕಾತಿ ಹಗರಣದಲ್ಲಿ ಕಾಂಗ್ರೆಸ್ನವರು ಆಪಾದನೆ ಮಾಡುವುದೇ ನಮ್ಮ ಕೆಲಸವೆಂದು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಇದರಲ್ಲಿ ಬಿಜೆಪಿಯ ಕೈವಾಡವಿಲ್ಲ ಎಂದು ಬಿ.ಸಿ. ಪಾಟೀಲ್ ಹೇಳಿದ್ದಾರೆ.
ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಬಿಜೆಪಿ ಕೈವಾಡವಿಲ್ಲ: ಸಚಿವ ಬಿ.ಸಿ.ಪಾಟೀಲ್ - ಹಾವೇರಿಯಲ್ಲಿ ಮಾತನಾಡಿದ ಕೃಷಿ ಸಚಿವ ಬಿ.ಸಿ. ಪಾಟೀಲ್
ಪಿಎಸ್‌ಐ ನೇಮಕಾತಿ ಅಕ್ರಮದ ಆರೋಪಿ ದಿವ್ಯಾ ಹಾಗರಗಿ ಜೊತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಫೋಟೋ ಇದೆ. ಈ ಪ್ರಕರಣದಲ್ಲಿ ಬಿಜೆಪಿಯ ಕೈವಾಡವಿಲ್ಲ ಎಂದು ಹಾವೇರಿಯಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.
![ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಬಿಜೆಪಿ ಕೈವಾಡವಿಲ್ಲ: ಸಚಿವ ಬಿ.ಸಿ.ಪಾಟೀಲ್ B.C. Patil](https://etvbharatimages.akamaized.net/etvbharat/prod-images/768-512-15207963-thumbnail-3x2-bin.jpg)
ಬಿ.ಸಿ.ಪಾಟೀಲ್
ಧರ್ಮಯುದ್ಧದ ವಿಚಾರವಾಗಿ ಮಾತನಾಡಿದ ಅವರು, ಧರ್ಮ ಇರುವವರೆಗೆ ಧರ್ಮ ಯುದ್ಧ ನಡೆಯುತ್ತದೆ. ಶ್ರೀರಾಮ ಸೇನೆಯವರು ನಮ್ಮ ಧರ್ಮದ ಪ್ರತಿಪಾದಕರಾಗಿ ಕೆಲಸ ಮಾಡಿದರೆ ಒಳ್ಳೆಯದು. ಸರ್ಕಾರದ ಆದೇಶ, ನ್ಯಾಯಾಲಯದ ತೀರ್ಪಿಗೆ ಎಲ್ಲರೂ ತಲೆಬಾಗಬೇಕು. ತಾಲಿಬಾನ್ ಸಂಸ್ಕೃತಿ ಕರ್ನಾಟಕ ಅಥವಾ ದೇಶದಲ್ಲಿ ಬರಲು ಬಿಡುವುದಿಲ್ಲ. ನಮ್ಮ ದೇಶ ತಾಲಿಬಾನ್ ಆಗಲು ಬಿಡುವುದಿಲ್ಲ, ನಮ್ಮ ದೇಶ ನಮ್ಮ ದೇಶವಾಗಿಯೇ ಉಳಿಯುತ್ತದೆ ಎಂದರು.
ಇದನ್ನೂ ಓದಿ:ತಪ್ಪಿತಸ್ಥರು ಮುಟ್ಟಿ ನೋಡ್ಕೋಬೇಕು, ಹಾಗೆ ಮಾಡ್ತೀವಿ: ಸಚಿವ ಆರಗ ಜ್ಞಾನೇಂದ್ರ