ಕರ್ನಾಟಕ

karnataka

ETV Bharat / state

'ಬಿಜೆಪಿ ನಿಯೋಗಕ್ಕೆ ಹೆದರಿ ಸರ್ಕಾರದಿಂದ ಹಾವೇರಿ ಅತ್ಯಾಚಾರ ಸಂತ್ರಸ್ತೆಯ ಲೀಗಲ್​ ಕಿಡ್ನಾಪ್' - ಅತ್ಯಾಚಾರ ಪ್ರಕರಣ

ಅತ್ಯಾಚಾರ ಸಂತ್ರಸ್ತೆಯನ್ನು ಕೊಡಲೇ ಸಾಂತ್ವನ ಕೇಂದ್ರಕ್ಕೆ ಕರೆದುಕೊಂಡು ಬಂದು ಸೂಕ್ತ ಚಿಕಿತ್ಸೆ ಕೊಡಿಸಬೇಕು ಎಂದು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಮಂಜುಳಾ ಆಗ್ರಹಿಸಿದ್ದಾರೆ.

Etv Bharatbjp-mahila-morcha-president-manjula-reaction-on-haveri-rape-case
ಬಿಜೆಪಿ ನಿಯೋಗಕ್ಕೆ ಹೆದರಿ ಸರ್ಕಾರ ಸಂತ್ರಸ್ತೆಯನ್ನು ಲೀಗಲ್​ ಕಿಡ್ನಾಪ್ ಮಾಡಿಸಿದೆ: ಮಂಜುಳಾ

By ETV Bharat Karnataka Team

Published : Jan 14, 2024, 6:12 PM IST

Updated : Jan 15, 2024, 8:11 AM IST

ಬಿಜೆಪಿ ಮಹಿಳಾ ಮೋರ್ಚಾದ ಪ್ರತಿಕ್ರಿಯೆ

ಹಾವೇರಿ: ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧ ಸಂತ್ರಸ್ತೆಯನ್ನು ಭೇಟಿಯಾಗಲು ಇಂದು ಬಿಜೆಪಿ ರಾಜ್ಯ ಮಹಿಳಾ‌‌ ಮೋರ್ಚಾದ ನಿಯೋಗ ಹಾವೇರಿಗೆ ಆಗಮಿಸಿತ್ತು. ಆದರೆ ಸಂತ್ರಸ್ತೆಯನ್ನು ಅದಾಗಲೇ ಪೊಲೀಸರು ಸ್ಥಳಾಂತರ ಮಾಡಿದ್ದಾರೆ ಎಂದು ನಿಯೋಗ ಆಕ್ರೋಶ ವ್ಯಕ್ತಪಡಿಸಿತು.

ಮೋರ್ಚಾದ ರಾಜ್ಯಾಧ್ಯಕ್ಷೆ ಮಂಜುಳಾ ಮಾತನಾಡಿ, "ಇಂದು ಹಾವೇರಿಗೆ ಬಿಜೆಪಿ ರಾಜ್ಯ ಮಹಿಳಾ‌‌ ಮೋರ್ಚಾದ ನಿಯೋಗ, ಮಾಜಿ ಸಿಎಂಗಳಾದ ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬರುತ್ತಿದ್ದಾರೆ ಎಂದು ಹೆದರಿದ ಸರ್ಕಾರ, ಪೊಲೀಸ್​ ಇಲಾಖೆಯ ಮೇಲೆ ಒತ್ತಡ ಹೇರಿ ಬೆಳಿಗ್ಗೆ 7 ವೇಳೆಗೆ ಸಂತ್ರಸ್ತೆಯನ್ನು ಲೀಗಲ್​ ಕಿಡ್ನಾಪ್ ಮಾಡಿಸಿದೆ" ಎಂದು ಆರೋಪಿಸಿದರು.​

"ಸಂತ್ರಸ್ತೆಯನ್ನು ಕೊಡಲೇ ಸಾಂತ್ವನ ಕೇಂದ್ರಕ್ಕೆ ಕರೆದುಕೊಂಡು ಬಂದು ಸೂಕ್ತ ಚಿಕಿತ್ಸೆ ಕೊಡಿಸಬೇಕು ಹಾಗೂ ಆಕೆಯ ಮಾನಸಿಕ ಬಲವನ್ನು ಹೆಚ್ಚಿಸಲು ಕೌನ್ಸೆಲಿಂಗ್ ಅನ್ನು ಸರ್ಕಾರ ಮತ್ತು ಜಿಲ್ಲಾಡಳಿತ ಕೊಡಿಸಬೇಕು" ಎಂದು ಒತ್ತಾಯಿಸಿದರು.

ಮಹಿಳಾ ಮೋರ್ಚಾದ ಉಪಾಧ್ಯಕ್ಷೆ​ ಮಾಳವಿಕಾ ಅವಿನಾಶ್​ ಮಾತನಾಡಿ, "ಹಾವೇರಿ ಘಟನೆ ಸಂಘಟನಾತ್ಮಕ ಅಪರಾಧ. ಸಂತ್ರಸ್ತೆ ಭಯಭೀತಳಾಗಿದ್ದಾಳೆ. ಕೇವಲ ಒಂದು ಕೇಸ್ ಅಲ್ಲ, ಬೆಳಕಿಗೆ ಬಾರದ ಹಲವು ಪ್ರಕರಣಗಳು ನಡೆದು ಹೋಗಿವೆ. ರೇಪ್ ಕೇಸ್‌ನಲ್ಲಿ ನಾವು ರಾಜಕಾರಣ ಮಾಡಿಲ್ಲ. ಕಾಂಗ್ರೆಸ್‌ನವರು ರಾಜಕಾರಣ ಮಾಡುತ್ತಿದ್ದಾರೆ. ಪೊಲೀಸರ ಮುಂದೆ ಆಕೆ ಹೇಳಿಕೆ ನೀಡಲು ಯಾಕೆ ಹೆದರಿದಳು?. ನೈತಿಕ ಪೊಲೀಸ್‌ಗಿರಿ ಮಾಡುವ ಇವರ ಬಗ್ಗೆ ಸಿಎಂ ಏನು ಹೇಳುತ್ತಾರೆ?. ಹೋಟೆಲ್​ಗೆ ನುಗ್ಗಿ ಸಂತ್ರಸ್ತೆಗೆ ಥಳಿಸಿದ್ದಾರೆ" ಎಂದರು.

"ನಂತರ ಆಕೆಯನ್ನು ಬೇರೆಡೆ ಕರೆದೊಯ್ದು ಗ್ಯಾಂಗ್‌ರೇಪ್ ಮಾಡಿದ್ದಾರೆ. ಇಂತಹ ಕೃತ್ಯ ನಡೆದಾಗ ಎಸ್‌ಐಟಿ ತಂಡ ಬರಬೇಕಿತ್ತು, ಆದು ಆಗಿದೆಯೇ?. ನಾವು ಭೇಟಿ ಬರುತ್ತೇವೆ ಎಂದು ಗೊತ್ತಾದ ಕೂಡಲೇ ಆಕೆಯನ್ನು ಇಲ್ಲಿಂದ ಬೇರೆಡೆಗೆ ಶಿಫ್ಟ್ ಮಾಡಿದ್ದಾರೆ. ಸಂತ್ರಸ್ತೆ ಈಗ ಎಲ್ಲಿದ್ದಾರೆಂದು ಗೊತ್ತಿಲ್ಲ. ಆಕೆಯ ಆರೋಗ್ಯ ಸುಧಾರಿಸಿಲ್ಲ, ಇಂತಹ ಸಂದರ್ಭದಲ್ಲಿ ಆಕೆಯನ್ನು ತನಿಖೆಗೆ ಕರೆದುಕೊಂಡು ಹೋಗುವುದು ಎಷ್ಟು ಸರಿ" ಎಂದು ಪ್ರಶ್ನಿಸಿದರು.

ಇದನ್ನೂ ಓದಿ:ಹಾವೇರಿ ಅತ್ಯಾಚಾರ ಪ್ರಕರಣದಲ್ಲಿ ಮತ್ತಿಬ್ಬರು ಆರೋಪಿಗಳ ಬಂಧನ: ಎಸ್ಪಿ

ಪ್ರಕರಣ ನಡೆದು ಐದು ದಿನಕ್ಕೆ ಹಲ್ಲೆ ಎಫ್​ಐಆರ್ ದಾಖಲಿಸಿಕೊಂಡಿದ್ದಾರೆ. ಮಹಿಳೆ ರೇಪ್ ಆಗಿದೆ ಅಂತ ಹೇಳಿದರೆ ಮೊದಲು ಎಫ್​ಐಆರ್ ದಾಖಲಿಸಬೇಕು ಅಂತ ಸುಪ್ರೀಂ ಕೋರ್ಟ್ ಹೇಳಿದೆ. ಇಲ್ಲಿ ಮೊದಲು ಕೇವಲ ಹಲ್ಲೆ ಸೆಕ್ಷನ್ ಹಾಕಿದ್ದಾರೆ. ರೇಪ್ ಆಗಿದೆ ಎಂದು ನ್ಯಾಯಾಧೀಶರ ಮುಂದೆ ಸಂತ್ರಸ್ತೆ ಹೇಳಿಕೆ ಕೊಟ್ಟ ಮೇಲೆ ಕೇಸ್ ದಾಖಲಾಗಿದೆ. ಪ್ರಕರಣ ಮುಚ್ಚಿಹಾಕುವ ಕೆಲಸವನ್ನ ಹಾನಗಲ್ ಪೊಲೀಸರು ಮಾಡುತ್ತಿದ್ದಾರೆ ಎಂದು ಬೊಮ್ಮಾಯಿ ಆರೋಪಿಸಿದರು.

ಹಾವೇರಿಯಲ್ಲಿರುವ ಸಂತ್ರಸ್ತೆಯನ್ನು ನಾನು ಭೇಟಿ ಆಗ್ತೀನಿ ಅಂತ ಬೇರೆ ಕಡೆ ಶಿಪ್ಟ್ ಮಾಡಿದ್ದಾರೆ. ಸ್ಪಾಟ್ ತೋರಿಸುವ ನೆಪದಲ್ಲಿ ಶಿರಸಿಗೆ ಬಿಟ್ಟು ಬಂದಿದ್ದಾರೆ ಎಂದು ಬೊಮ್ಮಾಯಿ ಆರೋಪಿಸಿದರು. ಕೇಸ್ ಮುಚ್ಚಿ ಹಾಕಲು ಪೊಲೀಸರ ಮೇಲೆ ಒತ್ತಡ ಇದೆ. ಅರೆಸ್ಟ್ ತೋರಿಸಬೇಕು ಅಂತ ಯಾರನ್ನೋ ಅರಸ್ಟ್ ಮಾಡಿದಾರೆ. ರೇಪ್ ಆರೋಪಿಗಳು ಹೊರಗೆ ಓಡಾಡ್ತಿದಾರೆ ಎಂದು ಬೊಮ್ಮಾಯಿ ದೂರಿದರು.

ಶನಿವಾರ ರಾತ್ರಿ ಸಾಂತ್ವನ ಕೇಂದ್ರಕ್ಕೆ ಶಾಸಕರು ಹೋಗಿದ್ದಾರೆ. ಈ ಜಿಲ್ಲೆಯಲ್ಲಿ ಏನು ನಡೆದಿದೆ? ಸಾಂತ್ವನ ಕೇಂದ್ರಕ್ಕೆ ರಾತ್ರಿ ಯಾಕೆ ಹೋದರು? ಪ್ರಕರಣದ ತನಿಖೆಯನ್ನು ಎಸ್ಐಟಿಗೆ ವಹಿಸಬೇಕು ಎಂದು ಮಾಜಿ ಸಿಎಂ ಆಗ್ರಹಿಸಿದರು.

Last Updated : Jan 15, 2024, 8:11 AM IST

ABOUT THE AUTHOR

...view details