ಕರ್ನಾಟಕ

karnataka

ETV Bharat / state

ಶಾಸಕ ಅರುಣಕುಮಾರ ಗೆಲುವಿನ ಸಂಭ್ರಮ: ಸಿಹಿ ಹಂಚಿದ ಬಿಜೆಪಿ ‌ಮುಖಂಡರು - ಶಾಸಕ ಅರುಣಕುಮಾರ ಗೆಲುವು

ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಅರುಣಕುಮಾರ ಪೂಜಾರ ಗೆಲುವಿಗೆ ಕಾರಣರಾದ ಮತದಾರರಿಗೆ ಬಿಜೆಪಿ ಸ್ಥಳೀಯ ಮುಖಂಡರು ಸಿಹಿ ಹಂಚಿದರು.

ಬಿಜೆಪಿ ‌ಮುಖಂಡರು
ಬಿಜೆಪಿ ‌ಮುಖಂಡರು

By

Published : Dec 22, 2019, 10:55 AM IST

ಹಾವೇರಿ/ರಾಣೆಬೆನ್ನೂರ: ಇತ್ತೀಚೆಗೆ ಕ್ಷೇತ್ರದಲ್ಲಿ ನಡೆದಿದ್ದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಅರುಣಕುಮಾರ ಪೂಜಾರ ಗೆಲುವು ಸಾಧಿಸಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರು ಮತದಾರರಿಗೆ ಸಿಹಿ ವಿತರಿಸಿದ್ರು.

ರಾಣೆಬೆನ್ನೂರು ನಗರದ ವಾರ್ಡ್​ ನಂ. 3 ಮತ್ತು 4ರ ಬಿಜೆಪಿ ಮುಖಂಡರಾದ ವೀರಪ್ಪ ಚನ್ನಬಸಪ್ಪ ಜಂಬಗಿ ಮತ್ತು ಮಹೇಶ ಕುದರಿಹಾಳ ಅವರು, ಅರುಣಕುಮಾರ ಪೂಜಾರ ಉಪಚುನಾವಣೆಯಲ್ಲಿ ಅಭೂತಪೂರ್ವ ಗೆಲವು ಸಾಧಿಸಿದ್ದಕ್ಕೆ ಅಡವಿ ಆಂಜನೇಯ ಬಡಾವಣೆ, ಗವಾರದರ ಓಣಿ, ಚಲವಾದಿ ಓಣಿಯಲ್ಲಿ ಪ್ರತಿ ಮನೆ ಮನೆಗೆ ತೆರಳಿ ಸಿಹಿ ವಿತರಿಸಿದರು.

ಸಿಹಿ ಹಂಚಿ ಸಂಭ್ರಮಮಿಸಿದ ಬಿಜೆಪಿ ‌ಮುಖಂಡರು

ಸಿಹಿ ವಿತರಣೆ ಕಾರ್ಯಕ್ರಮದಲ್ಲಿ ಶಾಸಕ ಅರುಣಕುಮಾರ ಪೂಜಾರ, ಅಜೇಯ ಜಂಬಗಿ, ಅನಿಲ ಸಿದ್ದಾಳಿ, ಮಲ್ಲಿಕಾರ್ಜುನ ಪೂಜಾರ ಸೇರಿದಂತೆ ಮತ್ತಿತರರು ಹಾಜರಿದ್ದರು.

ABOUT THE AUTHOR

...view details