ಹಾವೇರಿ:ಹಾವೇರಿ-ಗದಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶಿವಕುಮಾರ್ ಉದಾಸಿ ಅವರು ನಾಗಾ ಸಾಧುಗಳಿಂದ ಇಂದು ಆಶೀರ್ವಾದ ಪಡೆದರು.
ಶಿವಕುಮಾರ ಉದಾಸಿ ತಲೆ ಮೇಲೆ ಕೈಯಿಟ್ಟರು... ಅವರೇ ಕರೆದು ಆಶೀರ್ವದಿಸಿದ ನಾಗಾಸಾಧುಗಳು - Naga Sadhu
ದೇಶ ಪರ್ಯಟನೆಯಲ್ಲಿದ್ದ ನಾಗಾ ಸಾಧುಗಳು ಅನಿರೀಕ್ಷಿತವಾಗಿ ಹಾವೇರಿಗೆ ಭೇಟಿ ನೀಡಿದ್ದರು. ವಿಶೇಷ ಅಂದ್ರೇ ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವಕುಮಾರ್ ಉದಾಸಿ ಅವರನ್ನು ತಮ್ಮ ಬಳಿಗೆ ಕರೆಯಿಸಿಕೊಂಡು ಆಶೀರ್ವದಿಸಿ ಕಳಿಸಿದ್ದಾರೆ.

ನಾಗಾ ಸಾಧುಗಳಿಂದ ಆಶೀರ್ವಾದ ಪಡೆಯುತ್ತಿರುವ ಬಿಜೆಪಿ ಅಭ್ಯರ್ಥಿ ಉದಾಸಿ
ನಾಗಾ ಸಾಧುಗಳಿಂದ ಆಶೀರ್ವಾದ ಪಡೆಯುತ್ತಿರುವ ಬಿಜೆಪಿ ಅಭ್ಯರ್ಥಿ ಉದಾಸಿ
ಮತಪ್ರಚಾರ ನಡೆಸುತ್ತಿದ್ದ ಶಿವಕುಮಾರ್ ಉದಾಸಿ ಗ್ರಾಮದಲ್ಲಿ ನಾಗಾ ಸಾಧುಗಳು ಕಾರ್ಯನಿಮಿತ್ತ ಸಂಚರಿಸುತ್ತಿದ್ದರು. ಪ್ರಚಾರದ ಸುದ್ದಿ ತಿಳಿದು ನಾಗಾ ಸಾಧುಗಳು ಉದಾಸಿ ಅವರನ್ನು ತಮ್ಮಲ್ಲಿಗೆ ಆಹ್ವಾನಿಸಿದರು. ನಾಗಾ ಸಾಧುಗಳಿರುವ ವಾಹನ ಬಳಿ ತೆರಳಿದ ಶಿವಕುಮಾರ್, ಸಾಧುಗಳ ಆಶೀರ್ವಾದ ಪಡೆದರು. ಉದಾಸಿಯ ತಲೆ ಮೇಲೆ ಕೈಯಿಟ್ಟು ನಾಗಾ ಸಾಧು ಜೈಶ್ರೀರಾಮ್ ಎನ್ನುವ ಮೂಲಕ ಹಾರೈಸಿದರು.
Last Updated : Apr 8, 2019, 10:57 PM IST