ಹಾವೇರಿ: ಜೆಡಿಎಸ್ ತಮಗೆ ಲೆಕ್ಕಕ್ಕೆ ಇಲ್ಲ ಎಂದು ಹಿರೇಕೆರೂರು ಬಿಜೆಪಿ ಅಭ್ಯರ್ಥಿ ಹಾಗು ಅನರ್ಹ ಶಾಸಕ ಬಿ.ಸಿ.ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.
ಜೆಡಿಎಸ್ ನನಗೆ ಲೆಕ್ಕಕ್ಕೆ ಅಲ್ಲ: ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ್
ಜೆಡಿಎಸ್ ಲೆಕ್ಕಕ್ಕೆ ಇಲ್ಲ ಎಂದು ಹಿರೇಕೆರೂರು ಬಿಜೆಪಿ ಅಭ್ಯರ್ಥಿ ಅನರ್ಹ ಶಾಸಕ ಬಿ.ಸಿ.ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.
ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಚಿಕ್ಕಯಡಚಿ ಮತ್ತು ಹಿರೇಯಡಚಿ ಗ್ರಾಮಗಳಲ್ಲಿ ಪ್ರಚಾರ ನಡೆಸಿ ಅವರು ಮಾತನಾಡಿದರು. ಹಿರೇಕೆರೂರಲ್ಲಿ ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಬೆಂಬಲಿಸುವ ಕುರಿತಂತೆ ಮಾತನಾಡಿದ ಅವರು, ಪಕ್ಷೇತರ ಅಭ್ಯರ್ಥಿಗೆ ತಪ್ಪಿ ಯಾವ ರೀತಿ ಸಾವಿರಾರು ಓಟುಗಳು ಬೀಳುತ್ತವೆಯೋ ಅದೇ ರೀತಿ ಜೆಡಿಎಸ್ ಸಾವಿರ ಓಟು ತಗೆದುಕೊಂಡರೇ ಹೆಚ್ಚು ಎಂದು ವ್ಯಂಗ್ಯವಾಡಿದರು.
ಜೆಡಿಎಸ್ಗೆ 2004 ರಲ್ಲಿ ಹಿರೇಕೆರೂರಿನಲ್ಲಿ ಅಸ್ತಿತ್ವವೇ ಇಲ್ಲದಂತಾಗಿತ್ತು. ನಾನು ಜೆಡಿಎಸ್ ಸೇರಿದ ಮೇಲೆ ಹಿರೇಕೆರೂರರಲ್ಲಿ ಜೆಡಿಎಸ್ ಅಸ್ತಿತ್ವಕ್ಕೆ ಬಂತು ಎಂದು ಬಿ.ಸಿ.ಪಾಟೀಲ್ ಅಭಿಪ್ರಾಯಪಟ್ಟರು. ಕಳೆದ 4 ಚುನಾವಣೆಗಳಲ್ಲಿ ಯು.ಬಿ.ಬಣಕರ್ ಮತ್ತು ನನ್ನ ನಡುವೆ ನೇರಸ್ಪರ್ಧೆ ಇತ್ತು. ಈಗ ನಾವಿಬ್ಬರು ಒಂದಾಗಿದ್ದೇವೆ. ನನ್ನ ಆಯ್ಕೆ ಬಹತೇಕ ಖಚಿತವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.