ಕರ್ನಾಟಕ

karnataka

ETV Bharat / state

ಸಿಎಂ ಬೊಮ್ಮಾಯಿಗೆ ಶಿಗ್ಗಾಂವಿ ಫಿಕ್ಸ್​, ಹಾವೇರಿಯ 4 ಕ್ಷೇತ್ರಗಳಿಗೆ ಟಿಕೆಟ್​ ಘೋಷಣೆ.. ಎರಡು ಕ್ಷೇತ್ರ ಸಸ್ಪೆನ್ಸ್​ - ಅರುಣ್ ಕುಮಾರ್

ಹಾವೇರಿ ಜಿಲ್ಲೆಯ ಶಿಗ್ಗಾಂವಿ ಕ್ಷೇತ್ರಕ್ಕೆ ಬಸವರಾಜ ಬೊಮ್ಮಾಯಿ, ರಾಣೆಬೆನ್ನೂರು ಕ್ಷೇತ್ರಕ್ಕೆ ಅರುಣ್ ಕುಮಾರ್, ಬ್ಯಾಡಗಿ ವಿಧಾನಸಭಾ ಕ್ಷೇತ್ರಕ್ಕೆ ವಿರೂಪಾಕ್ಷಪ್ಪ ಬಳ್ಳಾರಿ ಮತ್ತು ಹಿರೆಕೇರೂರು ಕ್ಷೇತ್ರಕ್ಕೆ ಬಿ.ಸಿ ಪಾಟೀಲ್ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಲಾಗಿದೆ.

Haveri
ಹಾವೇರಿಯ 4 ಕ್ಷೇತ್ರಗಳ ಅಭ್ಯರ್ಥಿಗಳು

By

Published : Apr 12, 2023, 10:01 AM IST

Updated : Apr 12, 2023, 10:16 AM IST

ಹಾವೇರಿ: ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳಲ್ಲಿ 4 ವಿಧಾನಸಭಾ ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಿದೆ. ಬಿಜೆಪಿ ಮೊದಲ ಲಿಸ್ಟ್​​ನಲ್ಲಿ 2 ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಣೆ ಮಾಡದೆ ಬಿಜೆಪಿ ಹೈಕಮಾಂಡ್‌‌ ರಹಸ್ಯ ಉಳಿಸಿಕೊಂಡಿದೆ‌. ಹಾವೇರಿ ಎಸ್​​ಸಿ ಮೀಸಲು ಕ್ಷೇತ್ರ ಹಾಗೂ ಹಾನಗಲ್ ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿ ಪ್ರಕಟಿಸದೆ ಗೌಪ್ಯತೆ ಕಾಪಾಡಿಕೊಂಡಿದೆ.

4 ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಣೆ: ಶಿಗ್ಗಾಂವಿ ಕ್ಷೇತ್ರಕ್ಕೆ ಬಸವರಾಜ ಬೊಮ್ಮಾಯಿ, ರಾಣೆಬೆನ್ನೂರು ಕ್ಷೇತ್ರಕ್ಕೆ ಅರುಣ್ ಕುಮಾರ್, ಬ್ಯಾಡಗಿ ವಿಧಾನಸಭಾ ಕ್ಷೇತ್ರಕ್ಕೆ ವಿರೂಪಾಕ್ಷಪ್ಪ ಬಳ್ಳಾರಿ ಮತ್ತು ಹಿರೆಕೇರೂರು ಕ್ಷೇತ್ರಕ್ಕೆ ಬಿ.ಸಿ ಪಾಟೀಲ್ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಲಾಗಿದೆ. ನಾಲ್ಬರು ಹಾಲಿ ಶಾಸಕರಾಗಿದ್ದು, ಅವರು‌ ಈ ಹಿಂದೆ ಸ್ಫರ್ಧಿಸಿದ ಕ್ಷೇತ್ರಗಳಲ್ಲಿ ಟಿಕೆಟ್ ದೊರೆತಿದೆ. ಹಾಲಿ ಶಾಸಕ ನೆಹರು ಓಲೇಕಾರ್​ಗೆ ಮೊದಲ ಪಟ್ಟಿಯಲ್ಲಿ ಟಿಕೆಟ್ ದೊರೆತಿಲ್ಲ.

2021ರಲ್ಲಿ ಉಪಚುನಾವಣೆ ನಡೆದಿದ್ದ ಹಾನಗಲ್ ಕ್ಷೇತ್ರಕ್ಕೆ ಸಹ‌ ಬಿಜೆಪಿ ಅಭ್ಯರ್ಥಿ ಆಯ್ಕೆಯಾಗಿಲ್ಲ. ಈ ಮಧ್ಯ ರಾಣೆಬೆನ್ನೂರು ಕ್ಷೇತ್ರಕ್ಕೆ‌ ಅರುಣಕುಮಾರ ಗುತ್ತೂರು ಹೆಸರು ಪ್ರಕಟವಾಗುತ್ತಿದ್ದಂತೆ ಮಾಜಿ ಸಚಿವ ಆರ್. ಶಂಕರ ಅಸಮಾಧಾನಗೊಂಡಿದ್ದಾರೆ. ಟಿಕೆಟ್ ಸಿಗದ ಕಾರಣ ವಿಧಾನಪರಿಷತ್ ಸದಸ್ಯತ್ವಕ್ಕೆ ಇಂದು ರಾಜೀನಾಮೆ‌ ನೀಡಲಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ:ವಲಸಿಗರ ಕೈ ಬಿಡದ ಬಿಜೆಪಿ: ಟಿಕೆಟ್‌ ಗಿಟ್ಟಿಸಿಕೊಂಡವರ ವಿವರ..

ಮೊದಲ ಪಟ್ಟಿ ಬಿಡುಗಡೆ:ಮುಂಬರುವ ಚುನಾವಣೆಗೆ ಹಲವು ಅಚ್ಚರಿಗಳೊಂದಿಗೆ ಬಿಜೆಪಿ ಹೈಕಮಾಂಡ್ ತನ್ನ ಹುರಿಯಾಳುಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಹೊಸ‌ ಮುಖಗಳೊಂದಿಗೆ ಒಟ್ಟು 189 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಇನ್ನೂ 35 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಬಾಕಿ ಉಳಿಸಿಕೊಂಡಿದೆ. ಗುಜರಾತ್ ಮಾದರಿಯನ್ನೇ ಕರ್ನಾಟಕದಲ್ಲೂ ಅನುಸರಿಸಿರುವ ಬಿಜೆಪಿ ಹೈ ಕಮಾಂಡ್ 52 ಹೊಸ ಮುಖಗಳಿಗೆ ಈ ಬಾರಿ ಮಣೆ ಹಾಕಿದೆ. ಜತೆಗೆ 8 ಜನ ಮಹಿಳೆಯರಿಗೆ ಟಿಕೆಟ್ ನೀಡಿದೆ.‌ ಕೆಲ ಹಾಲಿ ಶಾಸಕರು, ಹಿರಿಯರನ್ನು ಕೈ ಬಿಟ್ಟಿರುವ ಬಿಜೆಪಿ ಹೈ ಕಮಾಂಡ್ ತನ್ನದೇ ಆದ ಚುನಾವಣಾ ಕಾರ್ಯತಂತ್ರ ರೂಪಿಸಿದೆ. ಬಿಜೆಪಿ ಇನ್ನೂ 35 ಕ್ಷೇತ್ರಗಳಿಗೆ ಬಿಜೆಪಿ ಹೈಕಮಾಂಡ್ ಇನ್ನೂ ಟಿಕೆಟ್​ ಘೋಷಣೆ ಮಾಡಿಲ್ಲ.‌ ಅದರಲ್ಲೂ ಕೆಲ ಕ್ಷೇತ್ರಗಳಿಗೆ ಅಭ್ಯರ್ಥಿ ಹೆಸರನ್ನು ಘೋಷಿಸದೇ ಇರುವುದು ಹಲವು ಅಚ್ಚರಿಗೆ ಕಾರಣವಾಗಿದೆ.

ಇದನ್ನೂ ಓದಿ:ಅಚ್ಚರಿಯ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ: ಟಿಕೆಟ್ ಘೋಷಿಸದ 35 ಕ್ಷೇತ್ರದ ಬಗ್ಗೆ ಹೆಚ್ಚಿದ ಕುತೂಹಲ

8 ಮಹಿಳೆಯರಿಗೆ ಟಿಕೆಟ್​: ಬಿಜೆಪಿ ಪ್ರಕಟಿಸಿದ 189 ಜನ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ 8 ಜನ ಮಹಿಳೆಯರಿಗೆ ಟಿಕೆಟ್​ ಘೋಷಣೆ ಮಾಡಲಾಗಿದೆ. ಅದರಲ್ಲಿ ಮುಜರಾಯಿ ಇಲಾಖೆಯ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಕಾರವಾರ ಕ್ಷೇತ್ರದ ರೂಪಾಲಿ ಸಂತೋಷ್ ನಾಯ್ಕ್ ಅವರಿಗೆ ಕೊಡಲಾಗಿದೆ. ನಾಗಮಂಗಲದಲ್ಲಿ ಸುಧಾ ಶಿವರಾಮೇಗೌಡ ಅವರಿಗೆ ಟಿಕೆಟ್​ ಘೋಷಿಸಲಾಗಿದೆ.

ಇದನ್ನೂ ಓದಿ:ಬಿಜೆಪಿ ಮೊದಲ ಪಟ್ಟಿ: 8 ಮಹಿಳೆಯರಿಗೆ ಟಿಕೆಟ್​ ಘೋಷಣೆ

Last Updated : Apr 12, 2023, 10:16 AM IST

ABOUT THE AUTHOR

...view details