ಹಾವೇರಿ : ಉಕ್ರೇನ್ನಲ್ಲಿ ರಷ್ಯಾ ನಡೆಸಿದ ಗುಂಡಿನ ದಾಳಿಗೆ ಬಲಿಯಾಗಿದ್ದ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ನವೀನ ಗ್ಯಾನಗೌಡರ ಮನೆಯಲ್ಲಿ ಮೃತ ನವೀನ ಅವರ ಹುಟ್ಟುಹಬ್ಬ ಆಚರಿಸಲಾಗಿದೆ. ಉಕ್ರೇನ್ ನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದ ನವೀನ್ ರಷ್ಯಾದ ದಾಳಿಗೆ ಮೃತಪಟ್ಟಿದ್ದರು.
ರಷ್ಯಾ ಉಕ್ರೇನ್ ಯುದ್ಧದಲ್ಲಿ ಮೃತಪಟ್ಟ ನವೀನ್ ಹುಟ್ಟುಹಬ್ಬ ಆಚರಣೆ - birtday celebration of naveen gyangowder
ಉಕ್ರೇನ್ನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದ ಹಾವೇರಿಯ ನವೀನ್ ಗ್ಯಾನಗೌಡ ಉಕ್ರೇನ್ ನಲ್ಲಿ ರಷ್ಯಾ ನಡೆಸಿದ ಗುಂಡಿನ ದಾಳಿಗೆ ಮೃತಪಟ್ಟಿದ್ದರು. ಮೃತನ ನೆನಪಿನಲ್ಲಿ ನವೀನ್ ಕುಟುಂಬಸ್ಥರು ನವೀನ್ ಅವರ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.

ರಷ್ಯಾ ಉಕ್ರೇನ್ ಯುದ್ಧದಲ್ಲಿ ಮೃತಪಟ್ಟ ನವೀನ್ ಹುಟ್ಟುಹಬ್ಬ ಆಚರಣೆ
ಮೃತ ನವೀನ ಭಾವಚಿತ್ರಕ್ಕೆ ಮಾಲೆ ಹಾಕಿ ಪೂಜೆ ಸಲ್ಲಿಸಿ, ನವೀನ್ನ ಕುಟುಂಬಸ್ಥರು ಹ್ಯಾಪಿ ಬರ್ತ್ ಡೇ ಟು ನವೀನ ಎಂದು ಬರೆದು ಹುಟ್ಟುಹಬ್ಬ ಆಚರಿಸಿದ್ದಾರೆ. ನವೀನ ಬದುಕಿದ್ದರೆ ಇವತ್ತು 23ನೇ ಬರ್ತ್ ಡೇ ಆಚರಣೆ ನಡೆಯುತ್ತಿತ್ತು. ಆದರೆ, ನವೀನ ಕುಟುಂಬಸ್ಥರು ಮೃತನ ನೆನಪಿನಲ್ಲಿ ಹುಟ್ಟುಹಬ್ಬ ಆಚರಿಸಿದ್ದಾರೆ.
ಓದಿ :ಬಳ್ಳಾರಿಯಲ್ಲಿ ಭಾರಿ ಮಳೆ: ಮನೆಗಳಿಗೆ ನುಗ್ಗಿದ ನೀರು, ಜನಜೀವನ ಅಸ್ತವ್ಯಸ್ತ