ಹಾವೇರಿ/ರಾಣೆಬೆನ್ನೂರು:ರಾಣೆಬೆನ್ನೂರು ಕ್ಷೇತ್ರದ ವಿಧಾನಸಭಾ ಉಪ ಚುನಾವಣೆ ಕಾವು ಜೋರಾಗಿದೆ. ಬಿಜೆಪಿಯಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದ್ದು, ಭಾರಿ ಪೈಪೋಟಿ ಶುರುವಾಗಿದೆ. ಟಿಕೆಟ್ಗಾಗಿ ಆಕಾಂಕ್ಷಿಗಳು ತೆರೆಮರೆಯಲ್ಲಿ ಪೈಪೋಟಿ ನಡೆಸುತ್ತಿದ್ದಾರೆ.
ರಾಣೆಬೆನ್ನೂರು ಕ್ಷೇತ್ರದಲ್ಲಿ ಈ ಹಿಂದೆ 2018 ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆಯಲ್ಲಿ ಗೊಂದಲ ಉಂಟಾಗಿ, ಹಲವು ರೀತಿ ಹೋರಾಟ - ಚೀರಾಟಗಳು ನಡೆದಿದ್ದವು. ಅಲ್ಲದೇ ಮೋದಿ ಹವಾದಲ್ಲಿ ಬಿಜೆಪಿ ಗೆಲ್ಲಬಹದು ಎಂಬ ಆಶಾವಾದದಿಂದಾಗಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಹನುಮನ ಬಾಲದಂತಿತ್ತು. ಯಾರನ್ನೇ ಕೇಳಿದರು ಟಿಕೆಟ್ ನಮಗೆ ಎಂಬ ಮಾತುಗಳ ಕ್ಷೇತ್ರದಲ್ಲಿ ಬರುತ್ತಿದ್ದವು. ಈ ಎಲ್ಲ ತಿಕ್ಕಾಟ, ತಿಣಕಾಟಗಳನ್ನು ನೋಡಿದ ಬಿಜೆಪಿ ಹೈಕಮಾಂಡ್ ಹಿಂದುಳಿದ ಸಮುದಾಯದ ಡಾ.ಬಸವರಾಜ ಕೇಲಗಾರ ಅವರಿಗೆ ಮಣೆ ಹಾಕಿತ್ತು. ಇದನ್ನು ಅರಗಿಸಿಕೊಳ್ಳಲಾಗದ ಬಿಜೆಪಿ ಮುಖಂಡರು ಚುನಾವಣೆ ಸಮಯದಲ್ಲಿ ಅವರ ವಿರುದ್ಧವೇ ಕೆಲಸ ಮಾಡಿದರು ಎಂಬ ಮಾತು ಸಹ ಕೇಳಿ ಬಂದಿತ್ತು. ಪರಿಣಾಮ ಬಿಜೆಪಿ ಅಭ್ಯರ್ಥಿ 50 ಸಾವಿರ ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ತೃಪ್ತಿಪಡುವಂತಾದರು ಹಾಗೂ ಕೆಪಿಜೆಪಿಯ ಆರ್. ಶಂಕರ್ ಜಯಗಳಿಸಿದ್ದರು.
ಮತ್ತೆ ಟಿಕೆಟ್ಗಾಗಿ ಕಾದಾಟ: