ಹಾವೇರಿ: ಜಮೀನಿಗೆ ತೆರಳಿದ್ದ ಇಬ್ಬರು ರೈತರ ಮೇಲೆ ಏಕಾಏಕಿ ಕರಡಿಯೊಂದು ದಾಳಿ ಮಾಡಿ ತೀವ್ರ ಗಾಯಗೊಳಿಸಿರುವ ಘಟನೆ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಸವನಕಟ್ಟಿ ಗ್ರಾಮದಲ್ಲಿ ಶನಿವಾರ ನಡೆದಿದೆ.
ಕರಡಿ ದಾಳಿಯಿಂದ ಇಬ್ಬರು ರೈತರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಬಸೀರಸಾಬ್ (45) ಮತ್ತು ರಜಾಕ್ (30) ವರ್ಷದ ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಇಬ್ಬರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಜಮೀನಿಗೆ ತೆರಳಿದ್ದ ವೇಳೆ ಈ ಇಬ್ಬರ ಮೇಲೆ ಕರಡಿ ದಾಳಿ ಮಾಡಿ, ತೀವ್ರವಾಗಿ ಗಾಯಗೊಳಿಸಿರುವುದು ಶಿಗ್ಗಾಂವಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಆಗಾಗ್ಗೆ ರೈತರ ಮೇಲೆ ಕರಡಿಗಳು ದಾಳಿ: ಒಂದು ವರ್ಷದಲ್ಲೇ ಶಿಗ್ಗಾಂವಿ ತಾಲೂಕಿನಲ್ಲಿ ರೈತರ ಮೇಲೆ ಕರಡಿ ದಾಳಿ ಮಾಡಿರುವ ಪ್ರಕರಣಗಳು ಆಗಿವೆ. ಶಿಗ್ಗಾಂವಿ ತಾಲೂಕಿನ ಅರಣ್ಯದಲ್ಲಿ ಕರಡಿಗಳು ಹೆಚ್ಚಾಗಿದ್ದು, ಅವುಗಳು ರೈತರ ಜಮೀನುಗಳಿಗೆ ಬಂದು ರೈತರ ಮೇಲೆ ದಾಳಿ ಮಾಡುತ್ತಿವೆ. ಕರಡಿಗಳು ಜಮೀನಿಗೆ ಬಾರದಂತೆ ಅರಣ್ಯ ಇಲಾಖೆ ಸಿಬ್ಬಂದಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಜಮೀನುಗಳಿಗೆ ಹೋಗಲು ರೈತರು ಭಯ ಪಡಬೇಕಾಗಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ಕರಡಿಯೊಂದಿಗೆ ಕಾದಾಡಿ ಬದುಕುಳಿದ ಅಜ್ಜ...!ಕಣ್ಣು ಗುಡ್ಡೆಯನ್ನು ಕಿತ್ತಿದ್ದ ಕರಡಿಯೊಂದಿಗೆ 72 ವರ್ಷದ ವೃದ್ಧ ಗಂಟೆ ಕಾಲ ಕಾದಾಡಿ ಪವಾಡ ಸದೃಶ್ಯ ಎಂಬಂತೆ ಬದುಕುಳಿದ ಘಟನೆ ಉತ್ತರಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಜಗಲ್ ಪೇಟನ ತಿಂಬಾಲಿಯಲ್ಲಿ ಶುಕ್ರವಾರ ನಡೆದಿತ್ತು. ಮಾಲೋರ್ಗಿ ಗ್ರಾಮದ ನಿವಾಸಿ ವಿಠ್ಠಲ್ ಸಲಾಕೆ ಎಂಬ ವೃದ್ಧನು ಕರಡಿ ದಾಳಿಯಿಂದ ಗಂಭೀರ ಗಾಯಗೊಂಡವರು.