ಹಾವೇರಿ : ದಿವಂಗತ ಸುರೇಶ್ ಅಂಗಡಿಯವರನ್ನು ಸಿಎಂ ಮಾಡಲು ನಡೆದಿದ್ದ ಸಭೆ ಬಗ್ಗೆ ನನಗೆ ಗೊತ್ತಿರಲಿಲ್ಲ. ಸದ್ಯ, ಸಿಎಂ ಬದಲಾವಣೆ ಇಲ್ಲ ಎಂದು ಕೃಷಿ ಸಚಿವ ಬಿ ಸಿ ಪಾಟೀಲ್ ಹೇಳಿದರು.
ಸುರೇಶ್ ಅಂಗಡಿ ಅವರನ್ನ ಸಿಎಂ ಮಾಡುವ ಸಭೆ ಬಗ್ಗೆ ನನಗೆ ಗೊತ್ತಿರಲಿಲ್ಲ.. ಸಚಿವ ಬಿ ಸಿ ಪಾಟೀಲ್ - There is no CM change in the state
ಕೃಷಿ ಸಂಬಂಧಿತ ಮಸೂದೆಗಳ ಬಗ್ಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಅಪಪ್ರಚಾರ ಮಾಡುತ್ತಿವೆ. ಭೂ ಸುಧಾರಣೆ ಮತ್ತು ಎಪಿಎಂಸಿ ಕಾಯ್ದೆ ಇವೆರಡೂ ರೈತರ ಪರ ಎಂದು ಸಮರ್ಥಿಸಿದರು..
ಸಚಿವ ಬಿ.ಸಿ ಪಾಟೀಲ್
ನಗರದಲ್ಲಿ ಮಾತನಾಡಿದ ಅವರು, ರಾಜ್ಯ ಅಥವಾ ಕೇಂದ್ರದಲ್ಲಿ ಸಿಎಂ ಬದಲಾವಣೆ ಬಗ್ಗೆ ಪ್ರಸ್ತಾಪ ಆಗಿಲ್ಲ. ಮುಂದಿನ ಎರಡೂ ಮುಕ್ಕಾಲು ವರ್ಷ ಯಡಿಯೂರಪ್ಪ ಅವರೇ ಸಿಎಂ ಆಗಿ ಮುಂದುವರಿಯಲಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಬಗ್ಗೆ ಸಿಎಂ ನಿರ್ಧಾರ ಮಾಡ್ತಾರೆ. ಪಕ್ಷದ ರಾಜ್ಯಾಧ್ಯಕ್ಷರು ಇದ್ದಾರೆ. ಅವರು ಈ ಬಗ್ಗೆ ಅಧಿಕೃತವಾಗಿ ಹೇಳ್ತಾರೆ ಎಂದರು.
ಕೃಷಿ ಸಂಬಂಧಿತ ಮಸೂದೆಗಳ ಬಗ್ಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಅಪಪ್ರಚಾರ ಮಾಡುತ್ತಿವೆ. ಭೂ ಸುಧಾರಣೆ ಮತ್ತು ಎಪಿಎಂಸಿ ಕಾಯ್ದೆ ಇವೆರಡೂ ರೈತರ ಪರ ಎಂದು ಸಮರ್ಥಿಸಿದರು.