ಹಾವೇರಿ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಹಿರೇಕೆರೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಸಿ .ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ.
ಇಂದು ಹಿರೇಕೆರೂರಿನ ತಮ್ಮ ಸ್ವಗೃಹದಲ್ಲಿ ಮಾತನಾಡಿದ ಅವರ, ಸಿದ್ದರಾಮಯ್ಯ ಜೆಡಿಎಸ್ನಲ್ಲಿ ರಾಜೀನಾಮೆ ಕೊಟ್ಟು ಕಾಂಗ್ರೆಸ್ಗೆ ಹೋದಾಗ ನೀವು ಮಾರಾಟ ಆಗಿದ್ದು ಎಷ್ಟು ದುಡ್ಡಿಗೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಹಾಳು ಮಾಡಿದ್ದು ಸಿದ್ದರಾಮಯ್ಯ. ಕಾಂಗ್ರೆಸ್ ಸೇರಬೇಕು ಎನ್ನುವ ಉದ್ದೇಶದಿಂದ ದೇವೇಗೌಡರ ಬೆನ್ನಿಗೆ ಚೂರಿ ಹಾಕಿ ಜೆಡಿಎಸ್ ಬಿಟ್ಟರು. ಜನರ ಚಪ್ಪಾಳೆ, ಸಿಳ್ಳೆಗಳಿಗೆ ಕುರಿ, ಕೋಳಿ ರೀತಿ ಮಾರಾಟ ಆಗಿದ್ದಾರೆ ಎನ್ನುತ್ತಿದ್ದಾರೆ. ಸಿದ್ದರಾಮಯ್ಯ ಕಾಂಗ್ರೆಸ್ಗೆ ಬರಲು ದೆಹಲಿಯಿಂದ ದುಡ್ಡು ಬಂದಿತ್ತಾ ಎಂದು ಪ್ರಶ್ನಿಸಿದರು.
ಹಿರೇಕೆರೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಸಿ .ಪಾಟೀಲ್ ವಾ ಅನರ್ಹ ಶಾಸಕರನ್ನು ಸಿದ್ದರಾಮಯ್ಯ ನಾಲಾಯಕ್ ಎಂದಿದ್ದಾರೆ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಾಲಾಯಕ್ ಅಂದ್ರೆ ಏನರ್ಥ, ಸಿದ್ದರಾಮಯ್ಯ ನಿಮ್ಮ ಪ್ರಕಾರ ನೀವೊಬ್ಬರೆ ಸತ್ಯ ಹರಿಶ್ಚಂದ್ರ. ಜಾರ್ಜ್ರನ್ನ ಮಂಪರು ಪರೀಕ್ಷೆಗೆ ಒಳಪಡಿಸಿದ್ರೆ ಸಿದ್ದರಾಮಯ್ಯದು ಏನೇನು ಇದೆ ಅನ್ನೋದು ಗೊತ್ತಾಗುತ್ತೆ. ಸಿದ್ದರಾಮಯ್ಯ ಹತ್ತಿರ ಹುಂಡಿನೇ ಇದೆ. ಅದು ಜಾರ್ಜ್, ಮಹದೇವಪ್ಪ, ಕೆಂಪಯ್ಯ ಬಳಿ ಇದೆ. ಅವರನ್ನ ಮಂಪರು ಪರೀಕ್ಷೆಗೆ ಒಳಪಡಿಸಿದ್ರೆ ಎಲ್ಲ ಗೊತ್ತಾಗುತ್ತೆ ಎಂದರು.
ಸಿದ್ದರಾಮಯ್ಯ ಪೊಲೀಸ್ ವ್ಯವಸ್ಥೆಯನ್ನೇ ಹಾಳು ಮಾಡಿದ್ದಾರೆ. ಪೊಲೀಸ್ ಇಲಾಖೆ ಕ್ಷಮೆ ಕೇಳಬೇಕು. ಈ ಇಲಾಖೆಯನ್ನು ಅಷ್ಟು ಹಗುರವಾಗಿ ಕಾಣಬೇಡಿ. ನಿಮ್ಮ ರಕ್ಷಣೆ ಮಾಡುವಂತಹ ಕೆಲಸ ಪೊಲೀಸರು ಮಾಡುತ್ತಾರೆ. ಕಾರ್ಯಾಂಗದಲ್ಲಿ ದಕ್ಷತೆಯಿಂದ ಕೆಲಸ ಮಾಡುವ ಪೊಲೀಸ್ ಇಲಾಖೆ. ಈ ಇಲಾಖೆ ಬಗ್ಗೆ ಮಾತನಾಡುತ್ತಿರಲ್ಲ ನಿಮಗೆ ನಾಚಿಕೆ ಆಗಬೇಕು. ನಾಲಗೆಗೆ ಎಲುಬಿಲ್ಲ ಎಂದು ಏನೇನೋ ಮಾತಾಡಬೇಡಿ. ಪೊಲೀಸರ ಕ್ಷಮೆ ಕೇಳದಿದ್ದರೆ ಪೊಲೀಸರು ನಿಮ್ಮ ವಿರುದ್ಧ ತಿರುಗಿ ಬೀಳುತ್ತಾರೆ ಎಂದು ಎಚ್ಚರಿಸಿದರು.
ಸಿದ್ದರಾಮಯ್ಯ ಆಟ ಕಾಂಗ್ರೆಸ್ಗೆ ಗೂಟ. ಇವರನ್ನು ನಂಬಿಕೊಂಡವರು ಕೆಟ್ಟ ಹೋಗೋದು ಖಚಿತ. ಸಿದ್ದರಾಮಯ್ಯ ನಡವಳಿಕೆಯಿಂದ ಬೇಸತ್ತು ಕಾಂಗ್ರೆಸ್ ಬಿಟ್ಟೆವು. ಮಂತ್ರಿ ಮಾಡ್ತೀನಿ ಅಂದಿದ್ದೆ, ಬಿಟ್ಟು ಹೋದ ಅಂತಾ ಸುಳ್ಳು ಹೇಳಬೇಡಿ. ಕಾಂಗ್ರೆಸ್ ನಿರ್ನಾಮ ಆಗುತ್ತೆ. ಕಾಂಗ್ರೆಸ್ ಮುಕ್ತ ಕರ್ನಾಟಕ, ಕಾಂಗ್ರೆಸ್ ಮುಕ್ತ ಹಿರೇಕೆರೂರು ಆಗುತ್ತದೆ ಎಂದರು.
ಸಿದ್ದರಾಮಯ್ಯ ನನ್ನ ಎದೆಗೆ ಚೂರಿ ಹಾಕಿದ್ರು. ಸಿದ್ದರಾಮಯ್ಯ ಸಿಎಂ ಆಗಬೇಕು ಅಂದವರಲ್ಲಿ ನಾನೇ ಮೊದಲಿಗ. ಸಿದ್ದರಾಮಯ್ಯ ಸಿಎಂ ಆಗಬೇಕು ಅಂದಿದ್ದಕ್ಕೆ ಅನೇಕ ಮುಖಂಡರ ಕೆಂಗಣ್ಣಿಗೆ ಗುರಿಯಾದೆ. 2018ರಲ್ಲಿ ಗೆದ್ದು ಬಂದ ಮೇಲೆ ಸಿದ್ದರಾಮಯ್ಯ ನನ್ನ ಬೆನ್ನಿಗೆ ಚೂರಿ ಹಾಕಿದ್ರು. ಇವರ ನಡವಳಿಕೆಯಿಂದ ಎಲ್ಲ ಶಾಸಕರು ಬಿಟ್ಟು ಬಂದರು. ಕಾಂಗ್ರೆಸ್ನಲ್ಲಿ ಯಾರೂ ಅಭ್ಯರ್ಥಿ ಸಿಗದಿದ್ದಕ್ಕೆ ಬನ್ನಿಕೋಡರನ್ನು ನಿಲ್ಲಿಸಿದ್ದಾರೆ. ಬನ್ನಿಕೋಡಗೆ ಜನರು ಈಗಾಗಲೆ ನಿವೃತ್ತಿ ಘೋಷಿಸಿದ್ದರು. ಕೆಂಪಯ್ಯ ಇಟ್ಕೊಂಡು ಟ್ರಂಕ್ ಓಪನ್ ಮಾಡಿ ಕಲೆಕ್ಷನ್ ಮಾಡುತ್ತಿದ್ದರು ಎಂದು ಆಕ್ರೋಶ ಹೊರ ಹಾಕಿದರು.