ಹಾವೇರಿ:ರಾಜ್ಯ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಈಗಾಗಲೇ ಅಭ್ಯರ್ಥಿಗಳು ಭರ್ಜರಿ ಪ್ರಚಾರ ನಡೆಸಿದ್ದಾರೆ. ಇತ್ತ ರಾಜ್ಯದ ಗಮನ ಸೆಳೆದಿರುವ ಹಿರೇಕೆರೂರು ಕ್ಷೇತ್ರದಲ್ಲಿಯೂ ಕೂಡ ಅಭ್ಯರ್ಥಿಗಳು ಪ್ರಚಾರಕ್ಕಿಳಿದಿದ್ದು, ಉಪ ಚುನಾವಣಾ ಕಣ ರಂಗೇರಿದೆ. ಇಂದು ಬಿಜೆಪಿ ಅಭ್ಯರ್ಥಿ, ಅನರ್ಹ ಶಾಸಕ ಬಿ ಸಿ ಪಾಟೀಲ್ ಕ್ಷೇತ್ರದ ಗ್ರಾಮಗಳಿಗೆ ತೆರಳಿ ಪಾದಯಾತ್ರೆ ಮೂಲಕ ಮತಯಾಚಿಸಿದರು.
ಪಾದಯಾತ್ರೆ ಮೂಲಕ ಬಿ ಸಿ ಪಾಟೀಲ್ ಪ್ರಚಾರ.. 'ಕೌರವ'ನಿಗೆ ಬಣಕಾರ ಸಾಥ್.. - ಹಿರೇಕೆರೂರು ಬಿಜೆಪಿ ಅಭ್ಯರ್ಥಿ ಬಿ.ಸಿ. ಪಾಟೀಲ್ ಹೇಳಿಕೆ
ಹಿರೇಕೆರೂರು ಉಪ ಚುನಾವಣಾ ಕಣ ರಂಗೇರಿದೆ. ಕ್ಷೇತ್ರದಲ್ಲಿ ಅಭ್ಯರ್ಥಿಗಳು ಭರ್ಜರಿ ಪ್ರಚಾರಕ್ಕಿಳಿದಿದ್ದಾರೆ. ಇಂದು ಬಿಜೆಪಿ ಅಭ್ಯರ್ಥಿ ಬಿ ಸಿ ಪಾಟೀಲ್ ಕ್ಷೇತ್ರದ ಗ್ರಾಮಗಳಿಗೆ ತೆರಳಿ ಪಾದಯಾತ್ರೆ ಮೂಲಕ ಮತಯಾಚಿಸಿದರು.
ಪಾದಯಾತ್ರೆ ಮೂಲಕ ಬಿ.ಸಿ. ಪಾಟೀಲ್ ಪ್ರಚಾರ
ವರಹ, ವೀರಾಪುರ ಮತ್ತು ನಿಡನೇಗಿಲು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಮನೆ ಮನೆಗೆ ತೆರಳಿ ಮತದಾರರಲ್ಲಿ ಬಿಜೆಪಿಗೆ ಮತ ಹಾಕುವಂತೆ ವಿನಂತಿಸಿದರು. ಇನ್ನು, ಬಿ ಸಿ ಪಾಟೀಲ್ಗೆ ಮಾಜಿ ಶಾಸಕ ಯು ಬಿ ಬಣಕಾರ, ಬಿಜೆಪಿ ಜಿಲ್ಲಾಧ್ಯಕ್ಷ ಎಸ್ ಆರ್ ಅಂಗಡಿ ಸೇರಿದಂತೆ ಕಾರ್ಯಕರ್ತರು ಸಾಥ್ ನೀಡಿದರು.