ಹಾವೇರಿ:ಪಿಎಫ್ಐ ಸಂಘಟನೆಗೆ ವಿದೇಶದಿಂದ ಹಣ ಬರುವ ಕುರಿತಂತೆ ತನಿಖೆ ನಡೆಸುವುದಾಗಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ಪಿಎಫ್ಐಗೆ ವಿದೇಶದಿಂದ ಹಣ ಬರುತ್ತಿರುವುದು ಖಚಿತವಾದಲ್ಲಿ ಕಠಿಣ ಕ್ರಮ: ಗೃಹ ಸಚಿವರ ಸ್ಪಷ್ಟನೆ - ಪಿಎಫ್ಐಗೆ ವಿದೇಶದಿಂದ ಹಣ ಖಚಿತವಾದಲ್ಲಿ ಕಠಿಣ ಕ್ರಮ
ಪಿಎಫ್ಐ ಸಂಘಟನೆಗೆ ವಿದೇಶದಿಂದ ಹಣ ಬರುತ್ತಿರುವ ಕುರಿತು ಕಚಿತ ಮಾಹಿತಿ ಲಭ್ಯವಾದಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವ ಬೊಮ್ಮಾಯಿ ತಿಳಿಸಿದ್ದಾರೆ.
ಬಸವರಾಜ್ ಬೊಮ್ಮಾಯಿ
ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಗೃಹ ಸಚಿವನಾಗಿ ಏನು ಕ್ರಮಕೈಗೊಳ್ಳಬೇಕು ಆ ಕ್ರಮ ಕೈಗೊಳ್ಳುತ್ತೇನೆ. ಯಾವುದೇ ಸಂಶಯ ಕಂಡುಬಂದರೂ ಅದನ್ನು ತನಿಖೆ ಮಾಡಿಸಲಾಗುವುದು. ಘಟನೆಯ ಬಗ್ಗೆ ಸಂಪೂರ್ಣವಾದ ಮಾಹಿತಿ ತಿಳಿದುಕೊಂಡು ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಇಂಟರ್ನೆಟ್, ಬ್ಯಾಂಕ್ ಅಕೌಂಟ್ ಎಲ್ಲವನ್ನು ತನಿಖೆ ಮಾಡುತ್ತೇವೆ. ಕಾನೂನು ಬದ್ದ ಇಲ್ಲದಿದ್ದರೆ ಕಾನೂನುಕ್ರಮ ಕೈಗೊಳ್ಳುವುದಾಗಿ ಬೊಮ್ಮಾಯಿ ತಿಳಿಸಿದರು.