ಹಾವೇರಿ: ಪಂಚಮಸಾಲಿ ಪೀಠ ಹುಟ್ಟಿರುವುದೇ ಪಂಚಮಸಾಲಿಗೆ ರಾಜ್ಯದಲ್ಲಿ 2ಎ ಮತ್ತು ಕೇಂದ್ರದಲ್ಲಿ ಒಬಿಸಿ ಸ್ಥಾನ ದೊರಕಿಸಲು ಎಂದು ಕೂಡಲ ಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
2ಎ ಮೀಸಲಾತಿಗಾಗಿ ಪಂಚಮಸಾಲಿ ಪೀಠ ಹುಟ್ಟಿದೆ: ಬಸವಜಯ ಮೃತ್ಯುಂಜಯ ಶ್ರೀ - Kudalasangama
ಇದುವರೆಗೆ ರಾಜ್ಯವನ್ನಾಳಿದ ಸರ್ಕಾರಗಳು ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಹಚ್ಚಿವೆ ಎಂದು ಕೂಡಲ ಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಆರೋಪಿಸಿದ್ದಾರೆ.
ಬಸವಜಯ ಮೃತ್ಯುಂಜಯ ಶ್ರೀ ಹೇಳಿಕೆ
ನಗರದಲ್ಲಿ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪಗೆ ನಾವು ಸಚಿವ, ನಿಗಮ ಮಂಡಳಿ ಸ್ಥಾನ ಕೇಳುತ್ತಿಲ್ಲ. ನಮಗೆ ಬೇಕಾಗಿರುವುದು ಪಂಚಮಸಾಲಿಗೆ 2ಎ ಮೀಸಲಾತಿ. ಎಲ್ಲದಕ್ಕೂ ಒಂದು ಮಿತಿ ಇರುತ್ತೆ. ಆ ಮಿತಿ ದಾಟಿದರೆ ಆಪಾಯ ಕಟ್ಟಿಟ್ಟ ಬುತ್ತಿ.
ಕಡಿಮೆ ಸಂಖ್ಯೆಯ ಆರ್ಥಿಕ ಸಬಲರಿಗೆ ಮೀಸಲಾತಿ ಸಿಕ್ಕಿದೆ. ಆದರೆ ಕಡಿಮೆ ಸಂಖ್ಯೆಯಲ್ಲಿರುವ ಅರ್ಥಿಕ ದುರ್ಲಬರಿಗೆ ಮೀಸಲಾತಿ ಸಿಕ್ಕಿಲ್ಲ. ಸಿಎಂ ಯಡಿಯೂರಪ್ಪ ತಮ್ಮ ಬೇಡಿಕೆಗೆ ಸ್ಪಂದಿಸಬೇಕು ಎಂದು ಶ್ರೀಗಳು ಒತ್ತಾಯಿಸಿದ್ದಾರೆ.