ಹಾವೇರಿ: ಜಿಲ್ಲೆಯ ಶಿಗ್ಗಾವಿ ತಾಲೂಕಿನ ಬಂಕಾಪುರ ಹಿಂದೂ ಮಹಾಸಭಾ ಗಣಪತಿ ನಿಮಜ್ಜನ ಕಾರ್ಯಕ್ರಮ ಗುರುವಾರ ಸಂಭ್ರಮದಿಂದ ನಡೆಯಿತು. ಕಳೆದ ಹಲವು ವರ್ಷಗಳಿಂದ ಬಂಕಾಪುರದಲ್ಲಿ ಹಿಂದೂ ಮಹಾಸಭಾ ವತಿಯಿಂದ ಗಣೇಶಮೂರ್ತಿ ಸ್ಥಾಪಿಸಲಾಗುತ್ತಿದೆ. ಈ ವರ್ಷ 21ದಿನಗಳ ಕಾಲ ಗಣೇಶನನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು.
ಬಂಕಾಪುರ ಹಿಂದೂ ಮಹಾಸಭಾ ಗಣಪತಿ ನಿಮಜ್ಜನ ಸಂಭ್ರಮ - ಹಾವೇರಿ ನ್ಯೂಸ್
ನಿನ್ನೆ ಹಾವೇರಿಯಲ್ಲಿ ಬಂಕಾಪುರ ಹಿಂದೂ ಮಹಾಸಭಾ ಗಣಪತಿ ನಿಮಜ್ಜನ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು. ಮೆರವಣಿಗೆ ಉದ್ದಕ್ಕೂ ಯುವ ಜನತೆ ಡಿಜೆ ಸೌಂಡ್ಗೆ ಸ್ಟೆಪ್ ಹಾಕಿ ಸಂಭ್ರಮಿಸಿದರು.
ಗಣಪತಿ ನಿಮಜ್ಜನ ಸಂಭ್ರಮ
ಗಣಪತಿ ಮೂರ್ತಿಯನ್ನು ಬಂಕಾಪುರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಿನ್ನೆ ಮೆರವಣಿಗೆ ಮಾಡಿ, ಬಳಿಕ ನಿಮಜ್ಜನ ಮಾಡಲಾಯಿತು. ಮೆರವಣಿಗೆ ಉದ್ದಕ್ಕೂ ಯುವ ಜನತೆ ಡಿಜೆ ಸೌಂಡ್ಗೆ ಸ್ಟೆಪ್ ಹಾಕಿ ಸಂಭ್ರಮಿಸಿದರು.
ಇನ್ನು ಮುಂಜಾಗೃತ ಕ್ರಮವಾಗಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಆದರೆ, ಮೆರವಣಿಗೆ ವೇಳೆ ಯುವಕರು ಕೊರೊನಾ ಮುಂಜಾಗ್ರತಾ ಕ್ರಮಗಳನ್ನು ಗಾಳಿಗೆ ತೂರಿದ ದೃಶ್ಯ ಕಂಡು ಬಂದಿತು.
Last Updated : Oct 1, 2021, 6:56 AM IST