ಕರ್ನಾಟಕ

karnataka

ETV Bharat / state

ಕರ್ಜಗಿಯಲ್ಲಿ ಬಂಡಿ ಉತ್ಸವ ಆಯೋಜನೆ: 40 ಜನರ ಮೇಲೆ ಸ್ವಯಂ ಪ್ರೇರಿತ ದೂರು ದಾಖಲು - ಹಾವೇರಿಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ್ ಬಾಲದಂಡಿ

ಕೋವಿಡ್-19 ನಿಯಮ ಉಲ್ಲಂಘನೆಯಾದ ಹಿನ್ನೆಲೆ ಹಾವೇರಿಯ ಕರ್ಜಗಿಯಲ್ಲಿ ಬಂಡಿ ಉತ್ಸವ ಆಯೋಜಿಸಿದ್ದ 40 ಜನರ ಮೇಲೆ ಸ್ವಯಂ ಪ್ರೇರಿತ ದೂರು ದಾಖಲಾಗಿದೆ.

Bandi festival organized in Karjagi, Haveri
ಹಾವೇರಿಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ್ ಬಾಲದಂಡಿ

By

Published : Jun 12, 2020, 9:20 PM IST

ಹಾವೇರಿ: ತಾಲೂಕಿನ ಕರ್ಜಗಿಯಲ್ಲಿ ಗುರುವಾರ ನಡೆದ ಬಂಡಿ ಉತ್ಸವದಲ್ಲಿ ಕೋವಿಡ್-19 ನಿಯಮ ಉಲ್ಲಂಘನೆಯಾಗಿದೆ. ಈ ಹಿನ್ನೆಲೆ ಬಂಡಿ ಉತ್ಸವ ಆಯೋಜಿಸಿದ್ದ 40 ಜನರ ಮೇಲೆ ಹಾವೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿರುವುದಾಗಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ್ ಬಾಲದಂಡಿ ತಿಳಿಸಿದ್ದಾರೆ.

ಹಾವೇರಿಯ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ್ ಬಾಲದಂಡಿ

ನಗರದಲ್ಲಿ ಮಾತನಾಡಿದ ಅವರು, ಈ ಕುರಿತಂತೆ ಗ್ರಾಮಸ್ಥರಿಗೆ ತಿಳಿಹೇಳಲಾಗಿತ್ತು. ಅಲ್ಲದೆ ಈ ವರ್ಷ ಬಂಡಿ ಉತ್ಸವ ಇಲ್ಲವೆಂದು ಪ್ರಕಟಣೆ ಸಹ ಹೊರಡಿಸಲಾಗಿತ್ತು. ಆದರೂ ಸಹ ಗ್ರಾಮದ ಕೆಲವರು ಸಂಪ್ರದಾಯ ಆಚರಿಸಿದ್ದಾರೆ. ಇದರಿಂದ ಕೋವಿಡ್​​-19 ನಿಯಮ ಉಲ್ಲಂಘನೆಯಾಗಿದೆ. ಈ ಕುರಿತಂತೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗಿದ್ದು, ನ್ಯಾಯಾಲಯದ ಆದೇಶದ ಮೇರೆಗೆ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ABOUT THE AUTHOR

...view details