ಕರ್ನಾಟಕ

karnataka

ETV Bharat / state

ವಿಧಾನ ಪರಿಷತ್​ ಚುನಾವಣೆ: ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿ ಬಾಲಚಂದ್ರ ಪಾಟೀಲ್​ - haveri district news

ವಿಧಾನ ಪರಿಷತ್​ ಚುನಾವಣೆಗೆ (State Legislative Council Election) ಹಾವೇರಿ ಬಿಜೆಪಿ ಪಾಳಯದಲ್ಲಿ ಟಿಕೆಟ್​ ಆಕಾಂಕ್ಷಿಗಳ ಸಂಖ್ಯೆ ಬೆಳೆಯುತ್ತಿದೆ. ಬ್ಯಾಡಗಿ ತಾಲೂಕಿನ ಮಾಜಿ ಶಾಸಕ ಸುರೇಶಗೌಡ ಪಾಟೀಲ್ ಪುತ್ರ ಬಾಲಚಂದ್ರ ಪಾಟೀಲ್ ಸಹ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಬಿಜೆಪಿ ನಾಯಕರ ಜೊತೆ ಚರ್ಚಿಸಿ ಅಭಿಪ್ರಾಯ ತಿಳಿಸುವುದಾಗಿ ಅವರು ಹೇಳಿದ್ದಾರೆ.

balachandra-patil-opinion-on-state-legislative-councils-election
ಬಾಲಚಂದ್ರ ಪಾಟೀಲ್

By

Published : Nov 11, 2021, 7:05 PM IST

ಹಾವೇರಿ: ವಿಧಾನಪರಿಷತ್ ಚುನಾವಣೆಗೆ (State Legislative Council Election) ದಿನಾಂಕ ಪ್ರಕಟವಾದ ಬೆನ್ನಲ್ಲೆ ಬಿಜೆಪಿಯ ಹಲವು ನಾಯಕರು ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸುತ್ತಿದ್ದಾರೆ.

ಬ್ಯಾಡಗಿ ತಾಲೂಕಿನ ಮಾಜಿ ಶಾಸಕ ಸುರೇಶಗೌಡ ಪಾಟೀಲ್ ಪುತ್ರ ಬಾಲಚಂದ್ರ ಪಾಟೀಲ್ ಸಹ ಪ್ರಬಲ ಆಕಾಂಕ್ಷಿಯಾಗಿದ್ದು, ಚುನಾವಣೆಯಲ್ಲಿ ಸ್ಪರ್ಧಿಸುವ ಆಶಯ ವ್ಯಕ್ತಪಡಿಸಿದ್ದಾರೆ.

ಬ್ಯಾಡಗಿ ಬಿಜೆಪಿ ಕಚೇರಿಯಲ್ಲಿ ತಮ್ಮ ಕ್ಷೇತ್ರದ ಸ್ಥಳೀಯ ಸಂಸ್ಥೆಗಳ ಸದಸ್ಯರು ಹಾಗೂ ಬೆಂಬಲಿಗರ ಜೊತೆ ಬಾಲಚಂದ್ರ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಾನು ಸಹ ವಿಧಾನಪರಿಷತ್ ಚುನಾವಣೆಯ ಟಿಕೆಟ್​ ಅಕಾಂಕ್ಷಿ. ಕಳೆದ ಬಾರಿ ಚುನಾವಣೆ ವೇಳೆ ಟಿಕೆಟ್ ಕೇಳಿದ್ದೆ, ಆಗ ನಾಯಕರು ಮುಂದಿನ ಬಾರಿ ನೋಡೋಣಾ ಎಂದಿದ್ದರು. ಅದರಂತೆ ಈ ಬಾರಿ ಮತ್ತೆ ಟಿಕೆಟ್ ಕೇಳುವುದಾಗಿ ತಿಳಿಸಿದರು.

ಈಗಾಗಲೇ ರಾಜ್ಯಾಧ್ಯಕ್ಷರು, ಜಿಲ್ಲಾಧ್ಯಕ್ಷರು ಸೇರಿದಂತೆ ಹಿರಿಯ ನಾಯಕರ ಜೊತೆ ಮಾತನಾಡಿದ್ದೇನೆ. ವಿಧಾನಪರಿಷತ್ ಸದಸ್ಯ ಚುನಾವಣೆಗೆ ಹೈಕಮಾಂಡ್ ತಮ್ಮ ಹೆಸರು ಸೂಚಿಸುವ ಸಾಧ್ಯತೆ ಇದೆ. ಪಕ್ಷದ ತೀರ್ಮಾನಕ್ಕೆ ನಾನು ಬದ್ಧ. ಶುಕ್ರವಾರದಿಂದ ಬಿಜೆಪಿ ನಾಯಕರನ್ನು ಭೇಟಿ ಮಾಡಿ ಚರ್ಚಿಸುತ್ತೇನೆ. ಯುವಕನಾಗಿರುವ ಕಾರಣ ಯುವಸಮೂಹದ ನಾಡಿಬಡಿತ ಗೊತ್ತಿದೆ. ಪಕ್ಷ ನನಗೆ ಟಿಕೆಟ್ ನೀಡಿದರೆ ಸ್ಪರ್ಧಿಸುತ್ತೇನೆ ಎಂದು ಪಾಟೀಲ್​ ಹೇಳಿದರು.

ABOUT THE AUTHOR

...view details