ಹಾವೇರಿ: ನಂಬಿಕೆ ಮತ್ತು ನಿಯತ್ತಿನಲ್ಲಿ ಮನುಷ್ಯರಿಗಿಂತ ಪ್ರಾಣಿಗಳೇ ಮೇಲು ಅನ್ನೋದು ಹಲವು ಸಂದರ್ಭಗಳಲ್ಲಿ ಸಾಬೀತಾಗಿದೆ. ಜಿಲ್ಲೆಯಲ್ಲೂ ಅಂತಹದ್ದೇ ಘಟನೆಯೊಂದು ಪ್ರಾಣಿಗಳ ನಂಬಿಕೆ ಹೇಗಿರುತ್ತೆ ಅನ್ನೋದಕ್ಕೆ ಸಾಕ್ಷಿಯಂತಿದೆ.
ಹೌದು, ಇಲ್ಲಿನ ರಾಷ್ಟ್ರೀಯ ಹೆದ್ದಾರಿ 48ರ ಬಳಿಯ ಗೋರಬಂದ ರಾಜಾಸ್ಥಾನಿ ಡಾಬಾದಲ್ಲೀಗ ಲಕ್ಷ್ಮಿಯದ್ದೇ ಮಾತು. ಅರೇ ಈ ಲಕ್ಷ್ಮೀ ಯಾರು ಅಂತಾ ಆಲೋಚಿಸುತ್ತಿದ್ದೀರಾ.. ಕಳೆದ 15 ದಿನಗಳಿಂದ ಡಾಬಾದ ಅತಿಥಿಯಾಗಿರುವ ಲಕ್ಷ್ಮಿಯು ಮಾಲೀಕ ಮತ್ತು ಕೆಲಸಗಾರರ ಅಚ್ಚುಮೆಚ್ಚಿನ ಕೋತಿ ಮರಿ.
ತಾಯಿ ಬಿಟ್ಟೋಗಿದ್ದ ಮರಿಗೆ ಸಿಕ್ಕಿತು ಮರುಜೀವ.. 15 ದಿನಗಳ ಹಿಂದೆ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ತಾಯಿ ಕೋತಿ ಬಿಟ್ಟು ಹೋದ ಮರಿಯೊಂದು ಚೀರಾಡುತ್ತಿತ್ತು. ಆ ಶಬ್ದ ಕೇಳಿದ ಗೋರಬಂದ ರಾಜಸ್ಥಾನಿ ಡಾಬಾದ ಮಾಲೀಕ ವಿಕಾಸ್ ಅವರು ಅಕ್ಕಪಕ್ಕದಲ್ಲಿ ತಾಯಿ ಇದೆಯಾ ಎಂದು ನೋಡಿದ್ದಾರೆ. ಬಳಿಕ ತಾಯಿ ಕೋತಿ ಕಾಣದಿರುವುದನ್ನು ಗಮನಿಸಿ, ಮರಿ ಕೋತಿಗೆ ಸಣ್ಣಪುಟ್ಟ ಗಾಯಗಳಾಗಿದ್ದರಿಂದ ಪಶು ಆಸ್ಪತ್ರೆಗೆ ತೋರಿಸಿ ಚಿಕಿತ್ಸೆ ಕೊಡಿಸಿದ್ದಾರೆ. ನಂತರ ಮಂಗನ ಮರಿಯನ್ನು ವಿಕಾಸ ಡಾಬಾದಲ್ಲಿಯೇ ಇಟ್ಟುಕೊಂಡಿದ್ದಾರೆ.
ಇದನ್ನೂ ಓದಿ:ಕೋತಿ ಮರಿಗೂ ಫೋನ್ ಗೀಳು.. ಮೊಬೈಲ್ಗಾಗಿ ಹಾತೊರೆಯುವ ಪರಿ ನೋಡಿ