ಕರ್ನಾಟಕ

karnataka

ETV Bharat / state

'ಹನುಮನಿಂದ ರಾಮನ ಕಡೆಗೆ'... ಹಾವೇರಿ ಯುವಕನಿಂದ ಸೈಕಲ್ ಮೇಲೆ ಅಯೋಧ್ಯಾ ಯಾತ್ರೆ

'ಹನುಮನಿಂದ ರಾಮನ ಕಡೆಗೆ ಯಾತ್ರೆ' ಎಂಬ ಶೀರ್ಷಿಕೆಯಡಿ ಹಾವೇರಿಯ ಯುವಕ ವಿವೇಕಾನಂದ ಸೈಕಲ್ ಯಾತ್ರೆ ನಡೆಸುತ್ತಿದ್ದಾರೆ.

Ayodhya trip on bicycle
ಹಾವೇರಿ ಯುವಕನಿಂದ ಸೈಕಲ್ ಮೇಲೆ ಅಯೋಧ್ಯಾ ಯಾತ್ರೆ

By

Published : Apr 13, 2021, 10:28 PM IST

ಹಾವೇರಿ: ಕೊರೊನಾ ಮುಕ್ತ ಭಾರತ ಸಂಕಲ್ಪದೊಂದಿಗೆ ಹಾವೇರಿಯ ಯುವಕ ವಿವೇಕಾನಂದ ಇಂಗಳಗಿ ಸೈಕಲ್ ಮೇಲೆ ಅಯೋಧ್ಯಾ ಯಾತ್ರೆ ಆರಂಭಿಸಿದ್ದಾರೆ.

ಹಾವೇರಿ ಯುವಕನಿಂದ ಸೈಕಲ್ ಮೇಲೆ ಅಯೋಧ್ಯಾ ಯಾತ್ರೆ

ಹುಕ್ಕೇರಿ ಮಠದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸದಾಶಿವ ಶ್ರೀಗಳು ವಿವೇಕಾನಂದನಿಗೆ ಹಾರೈಸುವ ಮೂಲಕ ಸೈಕಲ್​​ ಯಾತ್ರೆಗೆ ಚಾಲನೆ ನೀಡಿದರು. ಹುಕ್ಕೇರಿ ಮಠದಿಂದ ಆರಂಭವಾದ ವಿವೇಕಾನಂದ ಸೈಕಲ್ ಯಾತ್ರೆ ಮೊದಲು ಕೊಪ್ಪಳದ ಆಂಜನಾದ್ರಿಗೆ ತಲುಪಲಿದೆ. ಅಂಜನಾದ್ರಿಯಿಂದ ವಿವೇಕಾನಂದ ಮತ್ತು ಆತನ ಸ್ನೇಹಿತ ಸೇರಿಕೊಂಡು ಆಯೋಧ್ಯೆಗೆ ಪಯಣ ಬೆಳೆಸಲಿದ್ದಾರೆ. ಸುಮಾರು 20 ದಿನಗಳ ಯಾತ್ರೆ ಇದಾಗಿದ್ದು, ಮೇ 2ನೇ ವಾರದಲ್ಲಿ ವಿವೇಕಾನಂದ ಆಯೋಧ್ಯ ತಲುಪುವ ವಿಶ್ವಾಸ ವ್ಯಕ್ತಪಡಿಸಿದರು.

'ಹನುಮನಿಂದ ರಾಮನ ಕಡೆಗೆ ಯಾತ್ರೆ' ಎಂಬ ಶೀರ್ಷಿಕೆಯಡಿ ವಿವೇಕಾನಂದ ಸೈಕಲ್ ಯಾತ್ರೆ ನಡೆಸುತ್ತಿದ್ದಾರೆ. ಕೊರೊನಾ ಮುಕ್ತ ಭಾರತ ಸಂಕಲ್ಪ ಸೇರಿದಂತೆ ವಿವಿಧ ಸಂಕಲ್ಪಗಳನ್ನು ಇಟ್ಟುಕೊಂಡ ಸೈಕಲ್​​ ಯಾತ್ರೆ ಕೈಗೊಳ್ಳಲಾಗಿದೆ ಎಂದು ವಿವೇಕಾನಂದ ತಿಳಿಸಿದರು.

ABOUT THE AUTHOR

...view details