ಹಾನಗಲ್: ಜನಹಿತ ರಕ್ಷಣಾ ವೇದಿಕೆಯ ಕಾರ್ಯಕರ್ತರು ಇಂದು ತಾಲೂಕು ಆಸ್ಪತ್ರೆ ಸಿಬ್ಬಂದಿಗಳಿಗೆ ಮಾಸ್ಕ ವಿತರಿಸಿದರು. ತಾಲೂಕಿನ ಗ್ರಾಮಗಳಿಗೆ ತೆರಳಿ ಕೂಲಿ ಕಾರ್ಮಿಕರು, ವೃದ್ಧರಿಗೆ ಕೊರೊನಾ ವೈರಸ್ ಮಹಾಮಾರಿಯ ಕುರಿತು ಜಾಗೃತಿ ಮೂಡಿಸುವುದರ ಮೂಲಕ ಮಾಸ್ಕ್ ವಿತರಿಸಿದರು.
ಕೊರೊನಾ ವೈರಸ್ ಬಗ್ಗೆ ಜನಜಾಗೃತಿ: ಕೂಲಿ ಕಾರ್ಮಿಕರಿಗೆ, ವೃದ್ಧರಿಗೆ ಮಾಸ್ಕ್ ವಿತರಣೆ - Awareness about coronavirus
ಹಾನಗಲ್ ತಾಲೂಕಿನ ಗ್ರಾಮಗಳಿಗೆ ತೆರಳಿ ಕೂಲಿ ಕಾರ್ಮಿಕರು, ವೃದ್ಧರಿಗೆ ಕೊರೊನಾ ವೈರಸ್ ಮಹಾಮಾರಿಯ ಕುರಿತು ಜಾಗೃತಿ ಮೂಡಿಸುವುದರ ಮೂಲಕ ಜನಹಿತ ರಕ್ಷಣಾ ವೇದಿಕೆಯ ಕಾರ್ಯಕರ್ತರು ಮಾಸ್ಕ್ ವಿತರಿಸಿದರು.
![ಕೊರೊನಾ ವೈರಸ್ ಬಗ್ಗೆ ಜನಜಾಗೃತಿ: ಕೂಲಿ ಕಾರ್ಮಿಕರಿಗೆ, ವೃದ್ಧರಿಗೆ ಮಾಸ್ಕ್ ವಿತರಣೆ Mask Distribution](https://etvbharatimages.akamaized.net/etvbharat/prod-images/768-512-6616999-107-6616999-1585730456630.jpg)
ಮಾಸ್ಕ್ ವಿತರಣೆ
ಜನಹಿತ ರಕ್ಷಣಾ ವೇದಿಕೆಯ ಕಾರ್ಯದರ್ಶಿ ಸುಭಾಶ್ ಜೀ ಮಾತನಾಡಿ, ಸರ್ಕಾರ ಜನರ ಹಿತ ರಕ್ಷಣೆಗಾಗಿ ಶ್ರಮಿಸುತ್ತಿದೆ ಇಂತಹ ಸಮಯದಲ್ಲಿ ಸಾರ್ವಜನಿಕರು ಸೇರಿದಂತೆ ಸಂಘಟನೆಗಳು ಕೈ ಜೋಡಿಸುವುದು ಅವಶ್ಯಕತೆ ಇದೆ ಎಂದು ತಿಳಿಸಿದರು.
ಈಗಾಗಲೆ ಮಹಾಮಾರಿಗೆ ಹಲವು ಜನರು ತುತ್ತಾಗಿದ್ದಾರೆ ಇಂತಹ ತುರ್ತು ಸಮಯದಲ್ಲಿ ಜನರಿಗೆ ತಿಳುವಳಿಕೆ ಮೂಡಿಸುವುದು ನಮ್ಮ ಕರ್ತವ್ಯವಾಗಿದೆ. ನಮ್ಮ ಜನಹಿತ ರಕ್ಷಣಾ ವೇದಿಕೆಯಿಂದ ಇಂದು ತಾಲೂಕಿನ ಹಳ್ಳಿಗಳಿಗೆ ತೆರಳಿ ಜಾಗೃತಿ ಮೂಡಿಸುತಿದ್ದೇವೆ ಎಂದು ತಿಳಿಸಿದರು.