ರಾಣೆಬೆನ್ನೂರು:ನಗರದಲ್ಲಿ ಗಂಗಾಪುರ-ರಾಣೆಬೆನ್ನೂರು ಮಾರ್ಗ ಮಧ್ಯೆ ಹಾದು ಹೋಗಿರುವ ರೈಲ್ವೆ ಗೇಟ್ ಟ್ರಾಕ್ ಒಳಗೆ ಆಟೋಗಳು ಸಿಲುಕಿಕೊಂಡು ವಾಹನ ಸವಾರರು ಪರದಾಡಿದ ಘಟನೆ ನಡೆದಿದೆ.
ರೈಲ್ವೆ ಹಳಿ ಮಧ್ಯೆ ಸಿಲುಕಿಕೊಂಡ ವಾಹನಗಳು: ತಪ್ಪಿದ ಭಾರಿ ಅನಾಹುತ
ಗಂಗಾಪುರ-ರಾಣೆಬೆನ್ನೂರು ಮಾರ್ಗ ಮಧ್ಯೆ ಹಾದು ಹೋಗುವ ರೈಲ್ವೆ ಹಳಿಯಲ್ಲಿ ವಾಹನಗಳು ಸಿಲುಕಿಕೊಂಡು ವಾಹನ ಸವಾರು ಪರಾಡುವಂತಾಗಿತ್ತು. ನಂತರ ಸಾವರ್ಜನಿಕರು ಮುಂಜಾಗೃತಾ ಕ್ರಮವಾಗಿ ಆಟೋಗಳನ್ನು ಗೇಟ್ ಮೂಲಕ ಹೊರ ತೆಗೆದಿದ್ದು ಭಾರಿ ಅನಾಹುತವೊಂದು ತಪ್ಪಿದಂತಾಗಿದೆ.
ನಗರದ ಗಂಗಾಪುರ-ರಾಣೆಬೆನ್ನೂರು ಮಾರ್ಗ ಮಧ್ಯೆ ಹಾದು ಹೋಗುವ ರೈಲ್ವೆ ಹಳಿಯಲ್ಲಿ ವಾಹನಗಳು ಸಿಲುಕಿಕೊಂಡು ವಾಹನ ಸವಾರು ಪರಾಡುವಂತಾಗಿತ್ತು. ಪ್ರತಿನಿತ್ಯ ಈ ರೈಲ್ವೆ ಗೇಟ್ ಬಳಿ ನೂರಾರು ವಾಹನಗಳು ಸಂಚರಿಸುತ್ತವೆ. ನಿನ್ನೆ ರೈಲು ಹಾದು ಹೋಗುವಾಗ ಸಂಚಾರ ದಟ್ಟಣೆ ಉಂಟಾಗಿತ್ತು. ರೈಲ್ವೆ ಗೇಟ್ ಮ್ಯಾನ್ ಗೇಟ್ ಹಾಕಿದ್ದರಿಂದ ಹಳಿಗಳ ಮಧ್ಯದಲ್ಲಿಯೇ ವಾಹನಗಳು ಸಿಲುಕಿಕೊಂಡಿದ್ದವು.
ನಂತರ ವಾಹನ ಸವಾರರು ಮತ್ತು ಸಾವರ್ಜನಿಕರು ಮುಂಜಾಗೃತಾ ಕ್ರಮವಾಗಿ ಆಟೋಗಳನ್ನು ಗೇಟ್ ಮೂಲಕ ಹೊರ ತೆಗೆದಿದ್ದು ಭಾರೀ ಅನಾಹುತವೊಂದು ತಪ್ಪಿದಂತಾಗಿದೆ. ಈ ಕುರಿತು ಸಾರ್ವಜನಿಕರು ರೈಲ್ವೆ ಇಲಾಖೆ ಹಾಗೂ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.