ಕರ್ನಾಟಕ

karnataka

ETV Bharat / state

ಶೀಘ್ರದಲ್ಲೇ ಔರಾದಕರ್ ವರದಿ ಜಾರಿ: ಗೃಹ ಸಚಿವ ಬೊಮ್ಮಾಯಿ - Audradkar Report

ಔರಾದಕರ್ ವರದಿ ಜಾರಿಗೆ ಈಗಾಗಲೇ ಆದೇಶ ನೀಡಲಾಗಿದೆ. ಹಣಕಾಸು ಇಲಾಖೆಯಲ್ಲಿ ಸ್ವಲ್ಪ ಸಮಯ ಕೇಳಿದ್ದರಿಂದ ವಿಳಂಬವಾಗಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ಗೃಹ ಸಚಿವ ಬಸವರಾಜ್ ಬೊಮ್ಮಾಯಿ

By

Published : Sep 5, 2019, 7:13 PM IST

ಹಾವೇರಿ: ಔರಾದಕರ್ ವರದಿ ಜಾರಿಗೆ ಈಗಾಗಲೇ ಆದೇಶ ನೀಡಲಾಗಿದ್ದು, ಹಣಕಾಸು ಸಭೆಯಲ್ಲಿ ಸ್ವಲ್ಪ ಸಮಯ ಕೇಳಿದ್ದರಿಂದ ವಿಳಂಬವಾಗಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.

ನಗರದಲ್ಲಿ ಈ ಬಗ್ಗೆ ಮಾತನಾಡಿದ ಅವರು, ಔರಾದಕರ್ ವರದಿ ಆದಷ್ಟು ಬೇಗ ಜಾರಿಯಾಗಲಿದೆ ಎಂದರು. ಇನ್ನು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಬಂಧನ ಖಂಡಿಸಿ ನಡೆಯುತ್ತಿರುವ ಪ್ರತಿಭಟನೆ ವೇಳೆ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲಾಗುತ್ತಿದೆ. ರಾಜ್ಯದಲ್ಲಿ ಶಾಂತಿ-ಸುವ್ಯವಸ್ಥೆ ಪರಿಸ್ಥಿತಿ ಹಿಡಿತದಲ್ಲಿದೆ ಎಂದು ಹೇಳಿದರು.

ಗೃಹ ಸಚಿವ ಬಸವರಾಜ್ ಬೊಮ್ಮಾಯಿ

ಡಿ.ಕೆ.ಶಿವಕುಮಾರ್ ಬಂಧನಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ಈ ಪ್ರಕರಣವು ಡಿ.ಕೆ. ಶಿವಕುಮಾರ್, ಕೋರ್ಟ್ ಮತ್ತು ತನಿಖಾ ತಂಡಗಳ ಮಧ್ಯೆಯಿದೆ ಎಂದರು. ಇನ್ನು ನಮ್ಮ ಸರ್ಕಾರದ ಸಚಿವರು ಮನೆ ಮನೆಗೆ ಮದ್ಯ ಮಾರಾಟ ಮಾಡುವ ಚಿಂತನೆಯಲ್ಲಿರುವುದು ನನಗೆ ಗೊತ್ತಿಲ್ಲಾ. ಈ ಕುರಿತಂತೆ ಆದಷ್ಟು ಬೇಗ ಮಾಹಿತಿ ಪಡೆದು ಪ್ರತಿಕ್ರಿಯಿಸುವೆ ಎಂದು ಬೊಮ್ಮಾಯಿ ಸ್ಪಷ್ಟಪಡಿಸಿದರು.

ABOUT THE AUTHOR

...view details