ರಾಣೆಬೆನ್ನೂರು:ರಾಜ್ಯದಲ್ಲಿ ಅತಿ ಹಿಂದುಳಿದ ಬಂಜಾರ ಸಮುದಾಯವನ್ನು ಎಸ್ಸಿ ಮೂಲ ಪಟ್ಟಿಯಿಂದ ತಗೆದು ಹಾಕಲು ಕೆಲವರು ಹುನ್ನಾರ ನಡೆಸಿದ್ದಾರೆ ಎಂದು ಮಾಜಿ ಸಚಿವ ರುದ್ರಪ್ಪ ಲಮಾಣಿಆರೋಪಿಸಿದರು.
ನಗರದ ಪಂಪಾಪತಿ ಸಭಾ ಭವನದಲ್ಲಿ ಕರ್ನಾಟಕ ತಾಂಡ ರಕ್ಷಣಾ ವೇದಿಕೆ ಆಯೋಜಿಸಿದ ಬಂಜಾರ ಜಾಗೃತಿ ಸಮಾವೇಶ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ರಾಜ್ಯದಲ್ಲಿ ಇನ್ನೂ ಕೆಲ ತಾಂಡಗಳು ಕಂದಾಯ ಗ್ರಾಮಕ್ಕಾಗಿ ಹೋರಾಟ ನಡೆಸುತ್ತಿವೆ. ಜನರು ಶಿಕ್ಷಣಕ್ಕಾಗಿ ಹೋರಾಟ ಮಾಡುತ್ತಿದ್ದು, ಇನ್ನೂ ಸಮಾಜಮುಖಿಯಲ್ಲಿ ಗುರುತಿಸಿಕೊಳ್ಳಲಾಗದೆ ಹಿಂದುಳಿದಿದೆ ಎಂದರು.
ಇನ್ನು ಇಂತಹ ಸನ್ನಿವೇಶದಲ್ಲಿ ಎಸ್ಸಿ ಪಟ್ಟಿಯಲ್ಲಿ ಇರುವ ಬಂಜಾರ ಸಮುದಾಯದವನ್ನು ತೆಗೆದು ಹಾಕಬೇಕು ಎಂದು ಕೆಲ ವಿಕೃತ ಮನಸ್ಸುಗಳು ಹೊಂಚು ಹಾಕಿವೆ. ಸದ್ಯ ಸರ್ಕಾರ ಇದರ ಬಗ್ಗೆ ಯಾವುದೇ ಪ್ರಕ್ರಿಯೆ ತೊರಿಲ್ಲ, ಆದರೆ ಮುಂದಿನ ದಿನಗಳಲ್ಲಿ ಏನಾದರೂ ಮೂಲ ಪಟ್ಟಿಯಿಂದ ಕೈ ಬಿಡುವ ಉದ್ದೇಶ ಕಂಡು ಬಂದರೆ ಬಂಜಾರ ಸಮಯದಾಯದಿಂದ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ತಾಂಡ ರಕ್ಷಣಾ ವೇದಿಕ ರಾಜ್ಯಾಧ್ಯಕ್ಷ ಲಿಂಗರಾಜ ನಾಯಕ, ರಾಘವೇಂದ್ರ ಪೂಜಾರ, ಬೀರಪ್ಪ ಲಮಾಣಿ, ಎಸ್ ಐ ಸಿದ್ದಾರೂಢ ಬಡಿಗೇರ, ರಾಮಪ್ಪ ಲಮಾಣಿ, ಕೃಷ್ಣಮೂರ್ತಿ ಲಮಾಣಿ, ಕುಮಾರ ಲಮಾಣಿ, ಚಂದ್ರು ಲಮಾಣಿ ಸೇರಿದಂತೆ ನೂರಾರು ವಿದ್ಯಾರ್ಥಿಗಳು, ಸಮಾಜದ ಮುಖಂಡರು ಭಾಗಿಯಾಗಿದ್ದರು.