ಕರ್ನಾಟಕ

karnataka

ETV Bharat / state

ಕಳ್ಳಭಟ್ಟಿ ಸಾರಾಯಿ ತಯಾರಿಕೆ ಅಡ್ಡೆಗಳ ಮೇಲೆ ದಾಳಿ: 500 ಲೀ ಸಾರಾಯಿ ವಶ - liquor seized Hanagal

ಕಳ್ಳಬಟ್ಟಿ ಸಾರಾಯಿ ತಯಾರಿಕೆ ಅಡ್ಡೆಗಳ ಮೇಲೆ ಸ್ಥಳೀಯ ಪೊಲೀಸರು ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ.

Hanagal
ಕಳ್ಳಬಟ್ಟಿ ಸಾರಾಯಿ ವಶ

By

Published : Apr 11, 2020, 11:24 AM IST

ಹಾನಗಲ್: ಕಳ್ಳಭಟ್ಟಿ ತಯಾರಿಕಾ ಕೇಂದ್ರಗಳ ಮೇಲೆ ಬೆಳಿಗ್ಗೆ ಪೊಲೀಸರು ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳು ಜಂಟಿಯಾಗಿ ದಾಳಿ ನಡೆಸಿದರು. ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಹುಲಗಿನಕೊಪ್ಪ ಗ್ರಾಮದಲ್ಲಿ ಕಾರ್ಯಾಚರಣೆ ನಡೆದಿದೆ.

ದಾಳಿ ವೇಳೆ ಸಂಗ್ರಹಿಸಿಟ್ಟಿದ್ದ ಒಂದು ಸಾವಿರ ಲೀಟರ್ ಕೊಳೆ ನಾಶಪಡಿಸಿದ್ದು, 500 ಲೀಟರ್‌ನಷ್ಟು ಸಾರಾಯಿ ವಶಪಡಿಸಿಕೊಂಡಿದ್ದಾರೆ.

ಕಳ್ಳಭಟ್ಟಿ ಸಾರಾಯಿ ತಯಾರಿಕೆ ಅಡ್ಡೆಗಳ ಮೇಲೆ ಪೊಲೀಸರಿಂದ ದಾಳಿ

ಆರೋಪಿಗಳು ಗ್ರಾಮದಲ್ಲಿನ ಮನೆ ಹಾಗೂ ಮನೆಯ ಹಿಂದಿನ ಜಮೀನಿನಲ್ಲಿ ಅಕ್ರಮವಾಗಿ ಕಳ್ಳಬಟ್ಟಿ ತಯಾರಿಸುತ್ತಿದ್ದರು.

ಹಾನಗಲ್ ಸಿಪಿಐ ಪ್ರವೀಣ ನೀಲಮ್ಮನವರ, ಆಡೂರ ಪಿ.ಎಸ್.ಐ ಆಂಜನೇಯ, ಹಾನಗಲ್ ಪಿ.ಎಸ್.ಐ ಮಂಜುನಾಥ, ಅಬಕಾರಿ ನಿರೀಕ್ಷಕ ಹೊನ್ನಪ್ಪ ನೇತೃತ್ವದಲ್ಲಿ ದಾಳಿಯಲ್ಲಿದ್ದರು.

ಅಬಕಾರಿ ಹಾಗೂ ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details