ಕರ್ನಾಟಕ

karnataka

ETV Bharat / state

ಎಟಿಎಂಗೆ ಬರುವ ಅನಕ್ಷರಸ್ಥರನ್ನು ಗುರಿ ಮಾಡಿ ಹಣ ದೋಚುತ್ತಿದ್ದ ಕಳ್ಳಿಯ ಬಂಧನ - ಹಾನಗಲ್​ ಎಟಿಎಂ ಕಳ್ಳರ ಬಂಧನ

ಎಟಿಎಂಗೆ ಬರುವ ಅನಕ್ಷರಸ್ಥರನ್ನು ಟಾರ್ಗೆಟ್​ ಮಾಡಿಕೊಂಡು ಹಣ ಕದಿಯುತ್ತಿದ್ದ ಖತರ್ನಾಕ್​ ಕಳ್ಳಿಯನ್ನು ಬಂಧಿಸುವಲ್ಲಿ ಹಾನಗಲ್​ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತಳು ಹಾವೇರಿ ಮತ್ತು ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಹಲವು ಅಮಾಯಕರನ್ನು ವಂಚಿಸಿದ್ದಾಗಿ ತಿಳಿದುಬಂದಿದೆ.

atm money theft arrested by Hanagal police
ಹಾನಗಲ್​ ಎಟಿಎಂ ಕಳ್ಳರ ಬಂಧನ

By

Published : Oct 12, 2020, 9:10 PM IST

ಹಾವೇರಿ : ಎಟಿಎಂಗೆ ಬರುವ ಅನಕ್ಷರಸ್ಥ ಅಮಾಯಕರನ್ನ ವಂಚಿಸಿ ಹಣ ದೋಚುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಹಾನಗಲ್ ಪೊಲೀಸರು ಯಶಸ್ವಿಯಾಗಿದ್ದಾರೆ.

ಆರೋಪಿಯನ್ನು ಹಾನಗಲ್ ತಾಲೂಕಿನ ಬಾಳೂರು ಗ್ರಾಮದ ಕೌಸರಬಾನು (33) ಎಂದು ಗುರುತಿಸಲಾಗಿದೆ. ಎಟಿಎಂಗೆ​ ಬರುವ ಅನಕ್ಷರಸ್ಥ ಗ್ರಾಹಕರಿಗೆ ಹಣ ತೆಗೆದುಕೊಡುವುದಾಗಿ ಹೇಳಿ ಪಾಸವರ್ಡ್ ಪಡೆದು ಅವರ ಅಕೌಂಟಿನಲ್ಲಿ ಹಣ ನೋಡುತ್ತಿದ್ದಳು.

ಎಟಿಎಂಗೆ ಬರುವ ಅನಕ್ಷರಸ್ಥರನ್ನು ಗುರಿ ಮಾಡಿ ಹಣ ದೋಚುತ್ತಿದ್ದ ಕಳ್ಳಿಯ ಬಂಧನ

ಅಧಿಕ ಹಣವಿದ್ದರೆ ಸರ್ವರ್ ಡೌನ್ ಇದೆ ಎಂದು ಹೇಳಿ ತನ್ನಲ್ಲಿರುವ ಬೇರೆ ಎಟಿಎಂ ಕಾರ್ಡ್ ನೀಡುತ್ತಿದ್ದಳು. ಬಳಿಕ ಗ್ರಾಹಕರು ಹೋದ ನಂತರ ಎಟಿಎಂನಿಂದ ಹಣ ತೆಗೆಯುತ್ತಿದ್ದಳು.

ಇವಳಿಂದ ಅನ್ಯಾಯಕ್ಕೊಳಗಾದ ಹಾನಗಲ್ ತಾಲೂಕಿನ ಇಬ್ಬರು ಪೊಲೀಸ್ ಠಾಣೆಯ ಮೆಟ್ಟೆಲೇರಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯಿಂದ 8 ಎಟಿಎಂ ಕಾರ್ಡ್, 55 ಸಾವಿರ ನಗದು ವಶ ಪಡಿಸಿಕೊಳ್ಳಲಾಗಿದೆ. ಬಂಧಿತಳು ಹಾವೇರಿ ಮತ್ತು ಶಿವಮೊಗ್ಗ ಜಿಲ್ಲೆಯ ವಿವಿಧಡೆ ಹಲವು ಅಮಾಯಕರನ್ನು ವಂಚಿಸಿದ್ದಾಗಿ ತಿಳಿದುಬಂದಿದೆ.

ABOUT THE AUTHOR

...view details