ಹಾವೇರಿ: ಕೊರೊನಾ ಕೊರೊನಾ ಅಂತಾ ಎಲ್ಲಾ ಹೆದರಸ್ತಾರ್ರಿ, ಆದ್ರ ಅದರೊಳಗ ಏನು ಇಲ್ಲರಿ. ಹೀಗಂತ 'ಈಟಿವಿ ಭಾರತ'ದೊಂದಿಗೆ ಅಭಿಪ್ರಾಯ ಹಂಚಿಕೊಂಡವರು ಹಾವೇರಿ ನಗರ ಠಾಣೆಯ ಎಎಸ್ಐ ಸಿ.ಬಿ. ಕುಲಕರ್ಣಿ.
ಕೊರೊನಾದಿಂದ ಗುಣಮುಖರಾದ ಎಎಸ್ಐ: ಸೋಂಕಿನ ಬಗ್ಗೆ ಹೇಳಿದ್ದಿಷ್ಟು...
ಕೊರೊನಾದಿಂದ ಗುಣಮುಖರಾಗಿರುವ ಹಾವೇರಿ ನಗರ ಠಾಣೆಯ ಎಎಸ್ಐ ಸಿ.ಬಿ. ಕುಲಕರ್ಣಿ ಅವರು, ಕೊರೊನಾ ಬಂದ್ರೆ ಆತಂಕ ಪಡುವ ಅಗತ್ಯತೆ ಇಲ್ಲ. ಅದೊಂದು ಸಣ್ಣ ಕಾಯಿಲೆ ಅಷ್ಟೇ ಎಂದು ಸೋಂಕಿತರಿಗೆ ಧೈರ್ಯ ತುಂಬಿದ್ದಾರೆ.
ಅದು ನೆಗಡಿಯಂತಹ ರೋಗ, ಅದಕ್ಕೆ ಹೆದರುವ ಅಗತ್ಯತೆ ಇಲ್ಲಾ. ಕರ್ತವ್ಯದಲ್ಲಿದ್ದಾಗ ನನಗೆ ಕರೆ ಬಂತು. ನನಗೆ ಕೊರೊನಾ ಪಾಸಿಟಿವ್ ಇರುವುದನ್ನ ತಿಳಿಸಿದ್ರು. ಆದರೆ ಆಸ್ಪತ್ರೆಗೆ ಹೋಗುತ್ತಿದ್ದಂತೆ ನನ್ನ ಭಯ ದೂರವಾಯಿತು. ನಮ್ಮ ಹಿರಿಯ ಅಧಿಕಾರಿಗಳು ನನಗೆ ಧೈರ್ಯ ಹೇಳಿದ್ರು.
ಕೋವಿಡ್ ಆಸ್ಪತ್ರೆಯ ವೈದ್ಯರು ನಮ್ಮನ್ನು ಮನೆಯ ಸದಸ್ಯರಂತೆ ನೋಡಿಕೊಂಡರು. ಕೋವಿಡ್ ಆಸ್ಪತ್ರೆಯಲ್ಲಿ ಕೇವಲ ಐದೇ ಐದು ದಿನಗಳಲ್ಲಿ ನಾನು ಚೇತರಿಸಿಕೊಂಡು ಹೊರಗೆ ಬಂದೆ. ಕೊರೊನಾ ಸೋಂಕು ಬಂದವರು ಹೆದರಬೇಡಿ. ಕೋವಿಡ್ ಆಸ್ಪತ್ರೆಯಲ್ಲಿ ಉತ್ತಮವಾಗಿ ಆರೈಕೆ ಮಾಡುತ್ತಾರೆ. ಇದಕ್ಕೆ ಯಾರೂ ಭಯಪಡುವು ಬೇಡವೆಂದು ಎಎಸ್ಐ ಸಿ.ಬಿ. ಕುಲಕರ್ಣಿ ಹೇಳಿದ್ರು.