ಹಾವೇರಿ: ಭಾರತ ಧಾರ್ಮಿಕವಾಗಿ ಸಾಂಸ್ಕೃತಿಕವಾಗಿ ಅಧ್ಯಾತ್ಮೀಕವಾಗಿ ಸೌಹಾರ್ದಯುತವಾಗಿ ಒಂದಾಗಿಯೆ ಇದೆ. ಅದು ದೇಶದ ಚಿಕ್ಕ ಚಿಕ್ಕಮಕ್ಕಳು ಐದನೇ ತರಗತಿ ವಿದ್ಯಾರ್ಥಿಗಳಿಗೆ ಸಹ ಗೊತ್ತಿದೆ. ಆದರೆ ಇದು, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಗೆ ಅರ್ಥವಾಗಿಲ್ಲಾ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣಸಿಂಗ್ ಲೇವಡಿ ಮಾಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು ರಾಹುಲ್ ಗಾಂಧಿ ಇದು ತಿಳಿಯದಿರುವದರ ಬಗ್ಗೆ ನಾನೇನು ಹೇಳಲಿ. ಬಿಂದ್ರೆ ವಾಲಾ ಸೇರಿದಂತೆ ಆತಂಕವಾದಿ, ನಕ್ಸಲ್ವಾದ ಸೇರಿದಂತೆ ವಿವಿಧ ರೀತಿಯಲ್ಲಿ ಕಾಂಗ್ರೆಸ್ ಭಾರತವನ್ನ ಒಡೆದಿದೆ. ಇದನ್ನ ರಾಹುಲ್ ಗಾಂಧಿ ಅಧ್ಯಯನ ಮಾಡಿ ಭಾರತ್ ಜೋಡೋ ಯಾತ್ರೆ ಆರಂಭಿಸಬೇಕಿತ್ತು. ರಾಹುಲ್ ಗಾಂಧಿ ಎಲ್ಲಿ ಹೆಚ್ಚು ಮಾತನಾಡುತ್ತಾರೆಯೋ ಅಲ್ಲಿ ಕಾಂಗ್ರೆಸ್‌ಗೆ ಮತಗಳು ಕಡಿಮೆ ಬೀಳುತ್ತವೆ. ನರೇಂದ್ರ ಮೋದಿ ಮಾತನಾಡಿದ್ದಷ್ಟು ಬಿಜೆಪಿಗೆ ಅಧಿಕ ಮತಗಳು ಬರುತ್ತವೆ. ವಿನ್ನಿಂಗ್ ಟ್ರೆಂಡ್ ಬಿಜೆಪಿಯದ್ದಾಗಿದ್ದರೆ, ಲೂಸಿಂಗ್ ಟ್ರೆಂಡ್ ಕಾಂಗ್ರೆಸ್ಸಿನದು ಎಂದು ಅರುಣ್ ಸಿಂಗ್ ವ್ಯಂಗ್ಯವಾಡಿದರು.
ಒಂದು ಕುಟುಂಬಕ್ಕೆ ಒಂದೇ ಟಿಕೆಟ್ ಕುರಿತು ಪ್ರತಿಕ್ರಿಯಿಸಿ, ಈ ಕುರಿತು ಪಕ್ಷ ಇನ್ನು ನಿರ್ಧಾರ ಮಾಡಿಲ್ಲ. ಚುನಾವಣೆ ಬಂದಾಗ ಈ ಬಗ್ಗೆ ನಿರ್ಣಯ ಕೈಗೊಳ್ಳುತ್ತೇವೆ. ಬಿಜೆಪಿ, ಪರಿವಾರ ರಾಜಕೀಯ ವಿರೋಧಿಸುತ್ತದೆ. ಗಾಂಧಿ ಪರಿವಾರ ಕಾಂಗ್ರೆಸ್, ಲಾಲೂಪ್ರಸಾದ್ ಯಾದವ್ ಪರಿವಾರ ಆರ್ಜೆಡಿ, ಮುಲಾಯಂಸಿಂಗ್ ಯಾದವ್ ಪರಿವಾರ, ಗೌಡ ಪರಿವಾರ ಜೆಡಿಎಸ್ ಪಕ್ಷ ನಿಭಾಯಿಸುತ್ತಿರುವ ರೀತಿ ನಮ್ಮ ಪಕ್ಷ, ಪರಿವಾರ ರಾಜಕೀಯ ಮಾಡುವುದಿಲ್ಲ. ಒಬ್ಬ ವ್ಯಕ್ತಿ ಪೂರ್ಣ ಪಕ್ಷ ಎಂಬ ಪರಿವಾರ ನಿಯಂತ್ರಣ ಮಾಡಲು ಅವಕಾಶವಿಲ್ಲ ಎಂದರು.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಪದೇ ಪದೇ ಬಿಜೆಪಿಗೆ ಮುಜುಗರವಾಗುವ ಹೇಳಿಕೆ ನೀಡುತ್ತಿರುವುದಕ್ಕೆ ಈಗಾಗಲೇ ನೋಟಿಸ್ ನೀಡಿದ್ದೇವೆ. ಮಾಜಿ ಸಿಎಂ ಯಡಿಯೂರಪ್ಪ ಕರ್ನಾಟಕದಲ್ಲಿ ಅದ್ವಿತೀಯ ಬಿಜೆಪಿ ಮುಖಂಡರು ಅವರ ಬಗ್ಗೆ ಯತ್ನಾಳ ಸ್ವಾರ್ಥಕ್ಕಾಗಿ ಹೇಳಿಕೆ ನೀಡುತ್ತಿರುವದನ್ನು ಸಹಿಸಲಾಗುವುದಿಲ್ಲ. ಈ ರೀತಿಯ ಹೇಳಿಕೆ ನೀಡುವುದನ್ನು ಬಿಜೆಪಿಯ ಕಾರ್ಯಕರ್ತರು ಒಪ್ಪಿಕೊಳ್ಳುವದಿಲ್ಲ ಎಂದು ಅರುಣ್ ಸಿಂಗ್ ತಿಳಿಸಿದರು.
ಇದನ್ನೂ ಓದಿ:ಹಲಾಲ್ ಸರ್ಟಿಫೈಡ್ ದುಡ್ಡು ಭಯೋತ್ಪಾದಕ ಕೃತ್ಯಗಳಿಗೆ ಬಳಕೆ: ಪ್ರಮೋದ್ ಮುತಾಲಿಕ್ ಗಂಭೀರ ಆರೋಪ