ಕರ್ನಾಟಕ

karnataka

ETV Bharat / state

ರಾಣೆಬೆನ್ನೂರು ಉಪಚುನಾವಣೆ: ಐವರು ಬಿಜೆಪಿ ಆಕಾಂಕ್ಷಿಗಳಲ್ಲಿ ಪೂಜಾರ್​​ಗೆ ಮಣೆ - ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ

ಅನರ್ಹ ಶಾಸಕ ಆರ್.ಶಂಕರ್​ಗೆ ರಾಣೆಬೆನ್ನೂರು ಕ್ಷೇತ್ರದ ಉಪಚುನಾವಣೆಗೆ ಟಿಕೆಟ್ ನೀಡೋದಕ್ಕೆ ಸ್ಥಳೀಯ ಬಿಜೆಪಿ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ ಟಿಕೆಟ್ ಹಂಚಿಕೆ ಕಗ್ಗಂಟಾಗಿತ್ತು. ಇದೀಗ ಬಿಜೆಪಿ ಅಭ್ಯರ್ಥಿಯಾಗಿ ಅರುಣ್​ ಕುಮಾರ್ ಪೂಜಾರ್​ ಹೆಸರು ಅಂತಿಮವಾಗಿದೆ.

ರಾಣೆಬೆನ್ನೂರು ಉಪಚುನಾವಣೆ

By

Published : Nov 15, 2019, 10:29 AM IST

Updated : Nov 15, 2019, 11:04 AM IST

ಹಾವೇರಿ: ಜಿಲ್ಲೆ ರಾಣೆಬೆನ್ನೂರು ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಆಯ್ಕೆ ಗೊಂದಲ ಬಗೆಹರಿದಿದೆ. ಬಿಜೆಪಿ ಅಭ್ಯರ್ಥಿಯಾಗಿ ಅರುಣ್​ ಕುಮಾರ್ ಪೂಜಾರ ಹೆಸರು ಅಂತಿಮವಾಗಿದೆ. ಇದರಿಂದಾಗಿ ಬೆಂಗಳೂರಿನಲ್ಲೇ ಬೀಡುಬಿಟ್ಟಿದ್ದ ಆಕಾಂಕ್ಷಿಗಳು ಸ್ವಕ್ಷೇತ್ರದತ್ತ ಮುಖ ಮಾಡುತ್ತಿದ್ದಾರೆ.

ಅರುಣ್​ ಕುಮಾರ್ ಪೂಜಾರ್​- ಬಿಜೆಪಿ ಅಭ್ಯರ್ಥಿ

ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರಕ್ಕೆ ಮೊದಲು ಬಿಜೆಪಿ ಅಭ್ಯರ್ಥಿಯ ಹೆಸರಿನ ಪಟ್ಟಿಯಲ್ಲಿ ಆರ್ ಶಂಕರ್ ಹೆಸರು ಕೇಳಿಬಂದಿತ್ತು. ಆದರೆ ಬಿಜೆಪಿ ಹೈಕಮಾಂಡ್, ಆರ್ ಶಂಕರ್​ಗೆ ಟಿಕೆಟ್ ನಿರಾಕರಿಸಿದ ಬೆನ್ನಲ್ಲೇ ಆಕಾಂಕ್ಷಿಗಳು ಹೆಚ್ಚಾಗಿದ್ದರು. ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಸಜ್ಜನ, ಅರುಣ್​ ಕುಮಾರ್​​ ಪೂಜಾರ್​, ಡಾ.ಬಸವರಾಜ ಕೇಲಗಾರ, ಸಚಿವ ಈಶ್ವರಪ್ಪ ಪುತ್ರ ಕಾಂತೇಶ, ಪ್ರಕಾಶ ಬುರಡೀಕಟ್ಟಿ ಸೇರಿ ಹಲವರು ರೇಸ್​​ನಲ್ಲಿದ್ದರು. ಅನರ್ಹ ಶಾಸಕ ಆರ್.ಶಂಕರ್​ಗೆ ಟಿಕೆಟ್ ನೀಡೋದಕ್ಕೆ ಸ್ಥಳೀಯ ಬಿಜೆಪಿ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ ಟಿಕೆಟ್ ಹಂಚಿಕೆ ಕಗ್ಗಂಟಾಗಿತ್ತು. ಇದೀಗ ಸಿಎಂ ಯಡಿಯೂರಪ್ಪ ಅವರು, ಅರುಣ್​ ಕುಮಾರ್ ಪೂಜಾರ ಹೆಸರನ್ನು ಪ್ರಕಟಿಸಿದ್ದಾರೆ.

ಅರುಣ್​ ಕುಮಾರ್ ಪೂಜಾರ, 2013 ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಕಾಂಗ್ರೆಸ್​​ನ ಕೋಳಿವಾಡ ವಿರುದ್ಧ ಸೋಲುಂಡಿದ್ದರು.

Last Updated : Nov 15, 2019, 11:04 AM IST

ABOUT THE AUTHOR

...view details