ಹಾವೇರಿ: ಜಿಲ್ಲೆಗೆ ಇದುವರೆಗೊ ಬಂದ ಕೊರೊನಾ ಪ್ರಕರಣಗಳು ಮುಂಬೈ ಮೂಲದಿಂದಲೇ ಬಂದಿದ್ದು, ಇದೀಗ ಮುಂಬೈ ಕಾರ್ಮಿಕರನ್ನ ಹೊತ್ತ ರೈಲು ಹಾವೇರಿಗೆ ಬರುತ್ತಿದೆ ಎಂಬ ಸುದ್ದಿ ಜನರಲ್ಲಿ ಮತ್ತಷ್ಟು ಆತಂಕ ಹೆಚ್ಚಿಸಿದೆ.
ಮುಂಬೈನಿಂದ ಹಾವೇರಿಗೆ ಆಗಮಿಸಲಿರುವ ವಲಸೆ ಕಾರ್ಮಿಕರು.. ಜನರಲ್ಲಿ ಹೆಚ್ಚಿದ ಆತಂಕ - Haveri News
ಸರ್ಕಾರ ಹಾವೇರಿಯಿಂದ ಕೆಲಸಕ್ಕೆ ಹೋದ ಕಾರ್ಮಿಕರನ್ನ ವಾಪಸ್ ಕರೆಸಿಕೊಳ್ಳುತ್ತಿರುವುದಕ್ಕೆ ಜನರು ತೀವ್ರ ಆತಂಕ ವ್ಯಕ್ತಪಡಿಸಿದ್ದು, ಮುಂಬೈನಿಂದ ಬರುತ್ತಿರುವ ಕಾರ್ಮಿಕರನ್ನ ಸುರಕ್ಷಿತವಾಗಿ ಹಾಗೂ ಬೇರೆ ಯಾರಿಗೂ ರೋಗ ಹರಡದಂತೆ ವೈಜ್ಞಾನಿಕ ಕ್ರಮಗಳನ್ನು ಕೈಗೊಂಡು ಕರೆತರುವಂತೆ ಮನವಿ ಮಾಡಿದ್ದಾರೆ.
ಈಗಾಗಲೇ ಮೂರು ಪ್ರಕರಣಗಳಿಂದ ನಾವು ಸಾಕಷ್ಟು ಭಯಪಟ್ಟಿದ್ದೇವೆ. ಇಂತಹ ಸಮಯದಲ್ಲಿ ಸರ್ಕಾರ ಹಾವೇರಿಯಿಂದ ಕೆಲಸಕ್ಕೆ ಹೋದ ಕಾರ್ಮಿಕರನ್ನ ವಾಪಸ್ ಕರೆಸಿಕೊಳ್ಳುತ್ತಿರುವುದಕ್ಕೆ ಜನರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಸಾವಿರಾರು ಜನ ಮುಂಬೈನಿಂದ ಬಂದರೆ, ಅವರನ್ನ ಹೇಗೆ ಪರೀಕ್ಷೆ ಮಾಡುವುದು. ಇದರಿಂದ ಜಿಲ್ಲೆಯ ಕೊರೊನಾ ಪಾಸಿಟಿವ್ ಸಂಖ್ಯೆಗಳು ಬುಡಮೇಲಾಗಬಹುದು ಎಂಬ ಆತಂಕವನ್ನ ಸ್ಥಳೀಯರು ವ್ಯಕ್ತಪಡಿಸಿದ್ದಾರೆ.
ಹೀಗಾಗಿ ಜಿಲ್ಲಾಡಳಿತ ಮುಂಬೈನಿಂದ ಬರುತ್ತಿರುವ ಕಾರ್ಮಿಕರನ್ನ ಸುರಕ್ಷಿತವಾಗಿ ಹಾಗೂ ಬೇರೆ ಯಾರಿಗೂ ರೋಗ ಹರಡದಂತೆ ವೈಜ್ಞಾನಿಕ ಕ್ರಮಗಳನ್ನು ಕೈಗೊಂಡು ಕರೆತರುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ. ಅಲ್ಲದೆ, ಮುಂಬೈನಿಂದ ಬಂದ ಎಲ್ಲರ ಆರೋಗ್ಯ ತಪಾಸಣೆ ಮಾಡಿ ಕ್ವಾರಂಟೈನ್ ಮಾಡುವಂತೆ ಒತ್ತಾಯಿಸಿದ್ದಾರೆ.