ಕರ್ನಾಟಕ

karnataka

ETV Bharat / state

ಶ್ರೀಗಂಧದ ಮರಗಳನ್ನು ಮಾರಾಟ ಮಾಡಲು ಯತ್ನಿಸಿದ ಇಬ್ಬರ ಬಂಧನ - Photo

ಶ್ರಿಗಂಧದ ಮರಗಳನ್ನು ಕಡಿದು ಮಾರಲು ಯತ್ನಿಸಿದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ 16 ಶ್ರೀಗಂಧದ ತುಂಡುಗಳು ಹಾಗೂ ಎರಡು ಬೈಕ್​ಗಳನ್ನ ವಶಪಡಿಸಿಕೊಂಡಿದ್ದಾರೆ.

ಇಬ್ಬರ ಬಂಧನ

By

Published : Jun 27, 2019, 12:52 PM IST

ಹಾವೇರಿ:ಶ್ರೀಗಂಧದ ಮರಗಳನ್ನ ಕಡಿದು ಮಾರಾಟ ಮಾಡಲು ಯತ್ನಿಸಿದ ಇಬ್ಬರು ಆರೋಪಿಗಳನ್ನ ಬಂಧಿಸುವಲ್ಲಿ ಹಾವೇರಿ ಜಿಲ್ಲೆ ಹಾನಗಲ್ ಪೊಲೀಸರು ಯಶಸ್ವಿಯಾಗಿದ್ದಾರೆ.

ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಹಿರೂರು ಗ್ರಾಮದ ಸಿಕಂದರ್ (30) ಮತ್ತು ಖಲೀಮುಲ್ಲಾ (28) ಬಂಧಿತ ಆರೋಪಿಗಳು. ಬಂಧಿತರಿಂದ ಐವತ್ತು ಸಾವಿರ ರುಪಾಯಿ ಮೌಲ್ಯದ 16 ಶ್ರೀಗಂಧದ ತುಂಡುಗಳು ಹಾಗೂ ಎರಡು ಬೈಕ್ ಗಳನ್ನ ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳು ಶಿರಸಿ ತಾಲೂಕಿನ ಅರಣ್ಯ ಪ್ರದೇಶದಲ್ಲಿ ಶ್ರೀಗಂಧದ ಮರಗಳನ್ನ ಕಡಿದು ತಂದು ಸಾಗಣೆ ಮಾಡ್ತಿದ್ದರು ಎನ್ನಲಾಗಿದೆ. ಈ ಕುರಿತಂತೆ ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

For All Latest Updates

TAGGED:

Photo

ABOUT THE AUTHOR

...view details