ಹಾವೇರಿ: ಬೈಕ್ನಲ್ಲಿದ್ದ ವ್ಯಾನಿಟಿ ಬ್ಯಾಗ್ ನಲ್ಲಿನ ನಾಲ್ಕು ಬಂಗಾರದ ಬಳೆಗಳನ್ನ ಕಳ್ಳತನ ಮಾಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಜಿಲ್ಲೆಯ ಹಾನಗಲ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಹಾವೇರಿ: ಬಂಗಾರದ ಬಳೆಗಳನ್ನು ಕಳ್ಳತನ ಮಾಡಿದ್ದ ಆರೋಪಿಗಳು ಅಂದರ್ - ಹಾವೇರಿ ಜಿಲ್ಲೆಯಲ್ಲಿ ಮೂವರು ಕಳ್ಳರ ಬಂಧನ
ನವೆಂಬರ್ 8 ರಂದು ಮನೆಯ ಮುಂದೆ ನಿಲ್ಲಿಸಿದ್ದ ಬೈಕ್ ನ ಸೈಡ್ ಬ್ಯಾಗ್ನಲ್ಲಿದ್ದ, ವ್ಯಾನಿಟಿ ಬ್ಯಾಗ್ ಎಗರಿಸಿ ಚಿನ್ನದ ಬಳೆಗಳನ್ನ ಕದ್ದಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮೂವರು ಕಳ್ಳರ ಬಂಧನ
ಬಂಧಿತರನ್ನ ಮಂಜಪ್ಪ ಕುರಿಯವರ, ವೀರಭದ್ರಪ್ಪ ಗೂಳಿಯವರ ಮತ್ತು ಅಡಿವೆಪ್ಪ ಕುರಿಯವರ ಎಂದು ಗುರುತಿಸಲಾಗಿದೆ. ಫಕ್ಕೀರಪ್ಪ ಕುರಿಯವರ ಎಂಬ ಮತ್ತೋರ್ವ ಆರೋಪಿ ತಲೆಮರೆಸಿಕೊಂಡಿದ್ದು, ಬಂಧಿತರಿಂದ ಒಂದು 40 ಗ್ರಾಂ ತೂಕದ ನಾಲ್ಕು ಚಿನ್ನದ ಬಳೆಗಳನ್ನ ಜಪ್ತಿ ಮಾಡಲಾಗಿದೆ.
ನವೆಂಬರ್ 8ರಂದು ಮನೆಯ ಮುಂದೆ ನಿಲ್ಲಿಸಿದ್ದ ಬೈಕ್ ನ ಸೈಡ್ ಬ್ಯಾಗ್ ನಲ್ಲಿದ್ದ, ವ್ಯಾನಿಟಿ ಬ್ಯಾಗ್ ಎಗರಿಸಿ ಬ್ಯಾಗ್ ನಲ್ಲಿದ್ದ ಚಿನ್ನದ ಬಳೆಗಳನ್ನ ದೋಚಿದ್ದರು. ಹಾನಗಲ್ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನ ಬಂಧಿಸಿ, ಜೈಲಿಗಟ್ಟಿದ್ದಾರೆ.