ಹಾವೇರಿ: ಅನಧಿಕೃತವಾಗಿ ಡಿಸೇಲ್ ಸಂಗ್ರಹಿಸಿ ಲಾರಿಗಳಿಗೆ ತುಂಬಿಸುತ್ತಿರುವಾಗ ದಾವಣಗೆರೆ ಪೂರ್ವ ವಲಯದ ಐಜಿಪಿ ಸ್ಕ್ವಾಡ್ ತಂಡ ದಾಳಿ ನಡೆಸಿ ನಾಲ್ವರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಅನಧಿಕೃತವಾಗಿ ಡಿಸೇಲ್ ಸಂಗ್ರಹ: ನಾಲ್ವರು ಆರೋಪಿಗಳ ಬಂಧನ - Arrest of Four Accused for Unauthorized Diesel Collection
ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ತಡಸ ಕ್ರಾಸ್ ಬಳಿ ಅನಧಿಕೃತವಾಗಿ ಡಿಸೇಲ್ ಸಂಗ್ರಹಿಸಿ ಲಾರಿಗಳಿಗೆ ತುಂಬಿಸುತ್ತಿರುವಾಗ ಸ್ಕ್ವಾಡ್ ತಂಡ ದಾಳಿ ನಡೆಸಿ, ನಾಲ್ವರನ್ನು ಬಂಧಿಸಿದೆ.

Arrest
ಐಜಿಪಿ ಸ್ಕ್ವಾಡ್ನ ಡಿವೈಎಸ್ಪಿ ತಿರುಮಲೇಶ ನೇತೃತ್ವದಲ್ಲಿ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ತಡಸ ಕ್ರಾಸ್ನ ಎರಡು ಕಡೆಗಳಲ್ಲಿ ದಾಳಿ ನಡೆಸಲಾಗಿದೆ. ದಾಳಿ ವೇಳೆ ಒಂದು ಸಾವಿರ ಲೀಟರ್ ಡಿಸೇಲ್ ಜಪ್ತಿ ಮಾಡಿಕೊಂಡಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ತಡಸ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದಾಳಿ ನಡೆದಿದೆ.
TAGGED:
ಐಜಿಪಿ ಸ್ಕ್ವಾಡ್ ದಾಳಿ