ಕರ್ನಾಟಕ

karnataka

ETV Bharat / state

ಇಂದಿನಿಂದ ಹಾವೇರಿ ಎಪಿಎಂಸಿಯೊಳಗೆ ವ್ಯಾಪಾರ-ವಹಿವಾಟು ಪುನಾರಂಭ.. - ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಉಪಾಧ್ಯಕ್ಷ

ರಾಜ್ಯ ಸರ್ಕಾರದ ಸೂಚನೆ ಮೇರೆಗೆ ಎಪಿಎಂಸಿ ಆರಂಭಿಸಲಾಗಿದೆ. 18 ದಿನಗಳಿಂದ ರೈತರು,ವರ್ತಕರು, ಕೂಲಿ ಕಾರ್ಮಿಕರಿಲ್ಲದೇ ಎಪಿಎಂಸಿ ಬಿಕೋ ಎನ್ನುತ್ತಿತ್ತು. ಗುರುವಾರ ಮತ್ತು ಶುಕ್ರವಾರದಂದು 1360 ಕ್ವಿಂಟಾಲ್ ಮೆಕ್ಕೆಜೋಳ, 950 ಹತ್ತಿ ಅಂಡಿಗೆ ಹಾಗೂ 716 ಚೀಲ ಶೇಂಗಾ ಎಪಿಎಂಸಿಗೆ ಬಂದಿದೆ.

APMC trade restart from today
ಇಂದಿನಿಂದ ಎಪಿಎಂಸಿ ವ್ಯಾಪಾರ-ವಹಿವಾಟು ಪುನಾರಂಭ

By

Published : Apr 10, 2020, 8:32 PM IST

ಹಾವೇರಿ :ಲಾಕ್‌ಡೌನ್ ಹಿನ್ನೆಲೆಯಲ್ಲಿ ಕಳೆದ ಮಾ.23ರಿಂದ ಸ್ಥಗಿತಗೊಂಡಿದ್ದ ಎಪಿಎಂಸಿ ವ್ಯಾಪಾರ-ವಹಿವಾಟು ಈಗ ಮತ್ತೆ ಆರಂಭವಾಗಿದೆ.

ಇಂದಿನಿಂದ ಎಪಿಎಂಸಿ ವ್ಯಾಪಾರ-ವಹಿವಾಟು ಪುನಾರಂಭ..

ರಾಜ್ಯ ಸರ್ಕಾರದ ಸೂಚನೆ ಮೇರೆಗೆ ಎಪಿಎಂಸಿ ಆರಂಭಿಸಲಾಗಿದೆ. 18 ದಿನಗಳಿಂದ ರೈತರು,ವರ್ತಕರು, ಕೂಲಿ ಕಾರ್ಮಿಕರಿಲ್ಲದೇ ಎಪಿಎಂಸಿ ಬಿಕೋ ಎನ್ನುತ್ತಿತ್ತು. ಗುರುವಾರ ಮತ್ತು ಶುಕ್ರವಾರದಂದು 1360 ಕ್ವಿಂಟಾಲ್ ಮೆಕ್ಕೆಜೋಳ, 950 ಹತ್ತಿ ಅಂಡಿಗೆ ಹಾಗೂ 716 ಚೀಲ ಶೇಂಗಾ ಎಪಿಎಂಸಿಗೆ ಬಂದಿದೆ. ರಾಣೇಬೆನ್ನೂರು ತಾಲೂಕಿನ ವಿವಿಧ ಗ್ರಾಮಗಳ ರೈತರು ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ತಂದಿದ್ದು, ಸ್ಥಳೀಯ ವ್ಯಾಪಾರಸ್ಥರು ಖರೀದಿ ನಡೆಸಿದರು.

18 ದಿನದ ಬಳಿಕ ವ್ಯಾಪಾರ ಆರಂಭಿಸಿದ್ದರೂ ಬೆಲೆಯಲ್ಲಿ ಹೇಳಿಕೊಳ್ಳುವಷ್ಟು ಬದಲಾವಣೆಯಾಗಿಲ್ಲ. ಕಳೆದ ತಿಂಗಳು 1 ಕ್ವಿಂಟಾಲ್ ಹತ್ತಿ ₹5300-5400 ರೂಪಾಯಿವರೆಗೆ ಮಾರಾಟವಾಗಿದ್ರೆ, ಗುರುವಾರ ₹5169 ವರೆಗೆ ಮಾರಾಟವಾಗಿದೆ. 1 ಕ್ವಿಂಟಾಲ್ ಶೇಂಗಾಗೆ ಕಳೆದ ತಿಂಗಳು ₹5800-5900 ರೂ. ಇದ್ರೆ, ಈಗ 5600 ರೂ. ಬೆಲೆಯಿದೆ. ಕಳೆದ ತಿಂಗಳು ಮೆಕ್ಕೆಜೋಳ 1 ಕ್ವಿಂಟಾಲ್‌ಗೆ 1200 ರೂ. ಇಂದ 900 ರೂ.ವರೆಗೂ ಇಳಿಕೆಯಾಗಿತ್ತು. ಇದರಿಂದಾಗಿ ರೈತರು ಮೆಕ್ಕೆಜೋಳ ಮಾರಾಟವನ್ನೇ ಕೈಬಿಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಆದ್ರೀಗ ಉತ್ತಮ ಗುಣಮಟ್ಟದ ಹಾಗೂ ಸಂಪೂರ್ಣ ಒಣಗಿದ 1 ಕ್ವಿಂಟಾಲ್‌ಗೆ ಮೆಕ್ಕೆಜೋಳಕ್ಕೆ 1425 ರೂ. ವರೆಗೆ ಬೆಲೆ ಬಂದಿದೆ. ಸದ್ಯ ಸ್ಥಳೀಯ ವ್ಯಾಪಾರಸ್ಥರು ಮಾತ್ರ ಖರೀದಿ ಮಾಡುತ್ತಿರುವ ಕಾರಣ ಬೆಲೆಯಲ್ಲಿ ಕೊಂಚ ಏರಿಕೆಯಾಗಿದೆ. ಮಹಾರಾಷ್ಟ್ರದಿಂದ ಖರೀದಿದಾರರು ಆಗಮಿಸಿದ್ರೆ, ಇನ್ನೂ ಹೆಚ್ಚಿನ ಬೆಲೆ ಬರಲಿದೆ ಎನ್ನುತ್ತಾರೆ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಉಪಾಧ್ಯಕ್ಷ ಜಿ ಜಿ ಹೊಟ್ಟಿಗೌಡ್ರ.

ABOUT THE AUTHOR

...view details