ರಾಣೆಬೆನ್ನೂರ: ನಗರದ ಬೆಳ್ಳುಳ್ಳಿ ಮಾರುಕಟ್ಟೆಯಲ್ಲಿ ಬೆಲೆ ದಿಢೀರ್ ಕುಸಿತ ಕಂಡ ಹಿನ್ನೆಲೆ ಸರ್ಕಾರ ಹಾಗೂ ದಲ್ಲಾಳಿಗಳ ವಿರುದ್ಧ ರೈತರು ಬೇಸರ ವ್ಯಕ್ತಪಡಿಸಿದ್ದಾರೆ.
ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ದರ ದಿಢೀರ್ ಕುಸಿತ: ರೈತರಿಗೆ ಸಂಕಷ್ಟ - ಬೆಳ್ಳುಳ್ಳಿ ದರ ದಿಢೀರ್ ಕುಸಿತ
ಒಂದೆಡೆ ಟೊಮೆಟೊ ಬೆಲೆ ಗಗನಕ್ಕೇರಿದ್ದರೆ, ಬೆಳ್ಳುಳ್ಳಿ ದರ ದಿಢೀರ್ ಕುಸಿತ ಕಂಡು ರೈತರು ಕಣ್ಣೀರು ಹಾಕುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ಎರಡು ವಾರ ಮಳೆಯಾದ ಕಾರಣ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಬೆಳ್ಳುಳ್ಳಿ ಮಾರಾಟ ಮಾಡಲು ಮಾರುಕಟ್ಟೆಗೆ ಅನ್ನದಾತರು ತಂದಿದ್ದು, ಈ ದಿಢೀರ್ ಬೆಲೆ ಕುಸಿತ ಆಘಾತವನ್ನುಂಟು ಮಾಡಿದೆ.
ನಿರಂತರವಾಗಿ ಸುರಿದ ಭಾರಿ ಮಳೆ ಹಿನ್ನೆಲೆ ಬೆಳ್ಳುಳ್ಳಿ ದರ ಕುಸಿತ ಕಂಡಿದೆ. ಕಳೆದ ಎರಡು ವಾರಗಳ ಹಿಂದೆ ಕ್ವಿಂಟಲ್ ಬೆಳ್ಳುಳ್ಳಿಗೆ 5 ರಿಂದ 6 ಸಾವಿರ ರೂಪಾಯಿವರಗೆ ಮಾರಾಟವಾಗಿತ್ತು. ಆದರೆ ಇಂದು ಕ್ವಿಂಟಲ್ ಗೆ 3-4 ಸಾವಿರಕ್ಕೆ ಮಾತ್ರ ಮಾರಾಟವಾಗುತ್ತಿದೆ ಎಂದು ರೈತರ ಅಳಲು ತೋಡಿಕೊಂಡರು.
ಕಳೆದ ಎರಡು ವಾರ ಮಳೆಯಾದ ಕಾರಣ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಬೆಳ್ಳುಳ್ಳಿ ಮಾರಾಟ ಮಾಡಲು ಮಾರುಕಟ್ಟೆಗೆ ತಂದಿದ್ದಾರೆ. ಆದರೆ ಹೊರ ಜಿಲ್ಲೆಯಿಂದ ರೈತರು ಹೆಚ್ಚಿನ ಬೆಳ್ಳುಳ್ಳಿ ತಂದ ಹಿನ್ನೆಲೆ ದರ ಕುಸಿತ ಕಂಡಿದೆ. ಅಲ್ಲದೇ ಮಧ್ಯವರ್ತಿಗಳು ಬೆಳ್ಳುಳ್ಳಿ ನೋಡಿ ಕಡಿಮೆ ದರಕ್ಕೆ ಕೇಳುತ್ತಿದ್ದಾರೆ. ಇದರಿಂದ ರೈತರಿಗೆ ಅನ್ಯಾಯವಾಗುತ್ತಿದ್ದು ನಮಗೆ ಬೆಂಬಲ ಬೆಲೆ ಒದಗಿಸಿ ಎಂದು ರೈತರು ಆಗ್ರಹಿಸಿದ್ದಾರೆ.