ಹಾವೇರಿ: ನಗರದ ನೆಚ್ಚಿನ ಕೊಬ್ಬರಿ ಹೋರಿ 'ಅನ್ನದಾತ 251' ಕ್ಕೆ ಅದರ ಮಾಲೀಕರು ಮತ್ತು ಅಭಿಮಾನಿಗಳು ಅದ್ಧೂರಿಯಾಗಿ ಜನ್ಮ ದಿನಾಚರಣೆ ಆಚರಿಸಿದ್ದಾರೆ.
ಕೊಬ್ಬರಿ ಹೋರಿಗೆ ಅದ್ಧೂರಿ ಹುಟ್ಟುಹಬ್ಬ: 'ಅನ್ನದಾತ'ನ ಬರ್ತಡೇ ಸಂಭ್ರಮ ಹೇಗಿತ್ತು ನೋಡಿ - Haveri District
ಉತ್ತರ ಕರ್ನಾಟಕ ಭಾಗದಲ್ಲಿ ಕೊಬ್ಬರಿ ಹೋರಿಗಳು ಎಂದರೆ ಎಲ್ಲಿಲ್ಲದ ಪ್ರೀತಿ. ಈಗ ಏಲಕ್ಕಿ ಕಂಪಿನ ನಗರಿ ಹಾವೇರಿಯಲ್ಲಿ ದೊಡ್ಡ ಹೆಸರು ಮಾಡಿರುವ ಕೊಬ್ಬರಿ ಹೋರಿ 'ಅನ್ನದಾತ'ನ ಹುಟ್ಟುಹಬ್ಬವನ್ನು ಅದರ ಮಾಲೀಕ ಹಾಗೂ ಅಭಿಮಾನಿಗಳು ಅದ್ಧೂರಿಯಾಗಿ ಆಚರಿಸಿದ್ದಾರೆ.
![ಕೊಬ್ಬರಿ ಹೋರಿಗೆ ಅದ್ಧೂರಿ ಹುಟ್ಟುಹಬ್ಬ: 'ಅನ್ನದಾತ'ನ ಬರ್ತಡೇ ಸಂಭ್ರಮ ಹೇಗಿತ್ತು ನೋಡಿ sdsd](https://etvbharatimages.akamaized.net/etvbharat/prod-images/768-512-9744903-thumbnail-3x2-vis.jpg)
ಅನ್ನದಾತ ಹೋರಿಯನ್ನ ಮಾಲೀಕರು ತಮಿಳುನಾಡಿನಿಂದ ಖರೀದಿಸಿ ತಂದಿದ್ದಾರೆ. ಈ ರೀತಿ ತಂದ ಹೋರಿ ಇದೀಗ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಹೆಸರು ಮಾಡಿದೆ. ಈ ಹಿನ್ನೆಲೆ ಹೋರಿ ತಂದ ವರ್ಷಕ್ಕೆ ಅನ್ನದಾತ 251 ಜನ್ಮದಿನವನ್ನ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಸುಮಾರು 25 ಕೆಜಿ ಕೇಕ್ ಕಟ್ ಮಾಡಿ ಬರ್ತಡೇ ಆಚರಿಸಲಾಯಿತು. ಹೋರಿ ಮಾಲೀಕರು ಮತ್ತು ಅಭಿಮಾನಿಗಳು ಅದಕ್ಕೆ ಕೇಕ್ ತಿನ್ನಿಸಿ ಸಂಭ್ರಮಿಸಿದ್ದಾರೆ.
ಬರ್ತಡೇ ಸಂಭ್ರಮವನ್ನ ಜಾಂಜ್ ಮೇಳ ಮತ್ತು ಡ್ರೋನ್ ಕ್ಯಾಮರಾ ಮತ್ತಷ್ಟು ಹೆಚ್ಚಿಸಿತ್ತು. ಬಂದ ಅಭಿಮಾನಿಗಳಿಗೆ ಅನ್ನಸಂತರ್ಪಣಿ ಆಯೋಜಿಸಲಾಗಿತ್ತು. ಅನ್ನದಾತ 251 ಕ್ಕೆ ಜೂಲಾ, ಕೊಬ್ಬರಿ, ಬಲೂನ್, ಗೆಜ್ಜೆ ಸೇರಿದಂತೆ ವಿವಿಧ ವಸ್ತುಗಳಿಂದ ಅಲಂಕರಿಸಲಾಗಿತ್ತು.