ಹಾವೇರಿ: ಶ್ರಾವಣ ಮಾಸದ ಶನಿವಾರ ಕದರಮಂಡಲಗಿ ಕಾಂತೇಶ್, ಸಾತೇನಹಳ್ಳಿ ಶಾಂತೇಶ್, ಶಿಕಾರಿಪುರ ಬ್ರಾಂತೇಶನಲ್ಲಿ ನೆಲೆಸಿರುವ ಆಂಜನೇಯನನ್ನು ಒಂದೇ ದಿನ ದರ್ಶನ ಪಡೆಯಬೇಕು. ಇದರಿಂದ ಕಾಶಿ ರಾಮೇಶ್ವರ ದರ್ಶನ ಪಡೆದ ಪುಣ್ಯ ಬರುತ್ತದೆ ಎನ್ನುವುದು ಭಕ್ತರ ನಂಬಿಕೆಯಾಗಿದೆ.
ಆಂಜನೇಯ ದೇವಸ್ಥಾನದಲ್ಲಿ ಭಕ್ತರ ಸಂಖ್ಯೆ ಕಡಿಮೆ ಈ ನಂಬಿಕೆಯ ಹಿನ್ನೆಲೆಯಲ್ಲಿ ಹಿಂದೆಲ್ಲಾ ಶ್ರಾವಣ ಮಾಸದ ಶನಿವಾರ ಭಕ್ತ ಸಾಗರವೇ ಹರಿದು ಬರುತ್ತಿತ್ತು. ಆದರೆ, ಈ ವರ್ಷ ಕೊರೊನಾ ಸೋಂಕಿನಿಂದ ಭಕ್ತರ ಸಂಖ್ಯೆಯಲ್ಲಿ ಭಾರಿ ಇಳಿಕೆಯಾಗಿದೆ.
ಜಿಲ್ಲೆಯಲ್ಲಿ ಹಲವು ವಿಶಿಷ್ಟ ಆಚರಣೆಗಳಿವೆ. ಈ ಮೂರು ಆಂಜನೇಯ ದೇವಸ್ಥಾನಗಳಲ್ಲಿ ಎರಡು ಹಾವೇರಿ ಜಿಲ್ಲೆಯಲ್ಲಿದ್ದರೆ, ಇನ್ನೊಂದು ಶಿವಮೊಗ್ಗ ಜಿಲ್ಲೆಯಲ್ಲಿದೆ. ಬ್ಯಾಡಗಿ ತಾಲೂಕಿನ ಕದರಮಂಡಲಗಿ ಕಾಂತೇಶ್, ಹಿರೇಕೆರೂರು ತಾಲೂಕಿನ ಸಾತೇನಹಳ್ಳಿ ಶಾಂತೇಶ ಹಾಗೂ ಶಿವಮೊಗ್ಗ ಜಿಲ್ಲೆ ಶಿಕಾರಿಪುರದ ಬ್ರಾಂತೇಶ ಆಂಜನೇಯ ದೇಗುಲಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತ್ತಿದ್ದರು ಭಕ್ತರಾದ ಎನ್.ಎಂ.ಕುಲಕರ್ಣಿ ಹೇಳುತ್ತಾರೆ.
ಕದರಮಂಡಲಗಿ ಆಂಜನೇಯನ ದೇವಸ್ಥಾನವನ್ನು ಜನಮೇಜಯ ರಾಜ ನಿರ್ಮಿಸಿದ್ದಾನೆ ಎನ್ನಲಾಗಿದೆ. ಕಾಂತೇಶನ ಕಣ್ಣಿನಲ್ಲಿ ಸಾಲಿಗ್ರಾಮ ಇರುವುದರಿಂದ ಈತನಿಗೆ ಕಾಂತೇಶ ಎಂಬ ಹೆಸರು ಬಂದಿದೆ ಎಂಬ ಪ್ರತೀತಿ ಇದೆ. ಸಾತೇನಹಳ್ಳಿಯ ಶಾಂತೇಶನಿಗೆ ನೆತ್ತಿಯಲ್ಲಿ ಹಾಗೂ ಶಿಕಾರಿಪುರದ ಬ್ರಾಂತೇಶನಿಗೆ ನಾಸಿಕದಲ್ಲಿ ಸಾಲಿಗ್ರಾಮ ಇದೆ ಅನ್ನೋದು ನಂಬಿಕೆ.