ಕರ್ನಾಟಕ

karnataka

ETV Bharat / state

ಅಂಗನವಾಡಿ ಶಿಕ್ಷಕಿ ವಿರುದ್ಧ ಮಕ್ಕಳ ಆಹಾರ ಪದಾರ್ಥಗಳನ್ನು ಕಳ್ಳತನ ಮಾಡಿದ ಆರೋಪ - Ranebennur Anganwadi Food Theft

ರಾಣೆಬೆನ್ನೂರು ತಾಲೂಕಿನ ಹೊಸಚಂದಾಪುರ ಗ್ರಾಮದ ಅಂಗನವಾಡಿ ಕೇಂದ್ರದ ಟೀಚರ್ ಅಂಗನವಾಡಿ ಮಕ್ಕಳಿಗೆ ನೀಡುವ ಆಹಾರ ಸಾಮಗ್ರಿಗಳನ್ನು ಕಳ್ಳತನ ಮಾಡುತ್ತಿದ್ದ ವೇಳೆ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿರುವ ಘಟನೆ ವರದಿಯಾಗಿದೆ. ಈ ಸಂಬಂಧ ವಿಡಿಯೋ ಸಹ ವೈರಲ್​ ಆಗಿದೆ.

Anganwadi teacher who stole children's food items
ಮಕ್ಕಳ ಆಹಾರ ಪದಾರ್ಥಗಳನ್ನು ಕಳ್ಳತನ ಮಾಡಿದ ಅಂಗನವಾಡಿ ಶಿಕ್ಷಕಿ

By

Published : Dec 25, 2020, 6:04 PM IST

ರಾಣೆಬೆನ್ನೂರು:ಅಂಗನವಾಡಿ ಮಕ್ಕಳಿಗೆ ನೀಡುವ ಆಹಾರ ಸಾಮಗ್ರಿಗಳನ್ನು ಅಲ್ಲಿಯ ಶಿಕ್ಷಕಿ ಕಳ್ಳತನ ಮಾಡುತ್ತಿದ್ದ ವೇಳೆ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿರುವ ಘಟನೆ ನಡೆದಿದೆ.

ಮಕ್ಕಳ ಆಹಾರ ಪದಾರ್ಥಗಳನ್ನು ಕಳ್ಳತನ ಮಾಡಿದ ಅಂಗನವಾಡಿ ಶಿಕ್ಷಕಿ

ರಾಣೆಬೆನ್ನೂರು ತಾಲೂಕಿನ ಹೊಸಚಂದಾಪುರ ಗ್ರಾಮದ ಅಂಗನವಾಡಿ ಕೇಂದ್ರದ ಟೀಚರ್ ಪರಸವ್ವ ಪರಮೇಶಪ್ಪ ಕುದರಿಹಾಳ ಕಳ್ಳತನ ಮಾಡುವಾಗ ಗ್ರಾಮಸ್ಥರ ಕೈಗೆ ಸಿಕ್ಕಿ ಬಿದ್ದ ಶಿಕ್ಷಕಿ.

ಇಂದು ಕ್ರಿಸ್ಮಸ್ ಹಬ್ಬದ ಹಿನ್ನೆಲೆ ಅಂಗನವಾಡಿ ಕೇಂದ್ರಕ್ಕೆ ರಜೆ ಇತ್ತು. ಇದನ್ನೇ ‌ಬಂಡವಾಳ ಮಾಡಿಕೊಂಡ ಶಿಕ್ಷಕಿ ಮತ್ತು ಆಕೆಯ ಸಹಾಯಕಿ, ಕೇಂದ್ರದ ಬಾಗಿಲು ತೆಗೆದು ಆಹಾರ ಪದಾರ್ಥಗಳನ್ನು ಕಳವು ಮಾಡುತ್ತಿದ್ದರು ಎನ್ನಲಾಗಿದ್ದು, ಗ್ರಾಮಸ್ಥರು ಘಟನೆಯ ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ಈಗ ವೈರಲ್​ ಆಗಿದೆ.

ಇನ್ನೂ ಇವರ ಈ ಕೃತ್ಯ ಗಮನಿಸಿ ಪ್ರಶ್ನಿಸಿದ ಗ್ರಾಮಸ್ಥರಿಗೇ ಅವಾಜ್​ ಹಾಕಿ, ಈ ಬಗ್ಗೆ ಯಾರಿಗೆ ಹೇಳುತ್ತೀಯಾ ಹೋಗಿ ಹೇಳು ಎಂದು ಉದ್ಧಟತನ ಮೆರೆದಿದ್ದಾರೆ ಎನ್ನಲಾಗಿದೆ.

ABOUT THE AUTHOR

...view details