ಕರ್ನಾಟಕ

karnataka

ETV Bharat / state

ಆಕಸ್ಮಿಕ ಬೆಂಕಿ : 18 ಎಕರೆಯಲ್ಲಿ ಬೆಳೆದಿದ್ದ ಮೆಕ್ಕೆಜೋಳ ಬೆಂಕಿಗಾಹುತಿ - 18 ಎಕರೆಯಲ್ಲಿ ಬೆಳೆದಿದ್ದ ಮೆಕ್ಕೆಜೋಳದ ತೆನೆಗಳು ಬೆಂಕಿಗಾಹುತಿ.

ಸುಮಾರು ಹದಿನೆಂಟು ಎಕರೆ ಜಮೀನಿನಲ್ಲಿ ಬೆಳೆದಿದ್ದ ಮೆಕ್ಕೆಜೋಳದ ತೆನೆಗಳು ಸುಟ್ಟು ಕರಕಲಾಗಿದ್ದು, ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ.

An accidental fire in a pile of maize in Haveri
ಮೆಕ್ಕೆಜೋಳದ ತೆನೆಗಳು ಬೆಂಕಿಗಾಹುತಿ

By

Published : Feb 14, 2021, 2:45 PM IST

ಹಾವೇರಿ: ಮೆಕ್ಕೆಜೋಳದ ತೆನೆಗಳ ರಾಶಿಗೆ ಆಕಸ್ಮಿಕ ಬೆಂಕಿ ತಗುಲಿ ಹೊತ್ತಿ ಉರಿದ‌ ಘಟನೆ ಬ್ಯಾಡಗಿ ತಾಲೂಕಿನ‌ ಚಿನ್ನಿಕಟ್ಟಿ ಗ್ರಾಮದಲ್ಲಿ ನಡೆದಿದೆ.

ಮೆಕ್ಕೆಜೋಳದ ತೆನೆಗಳು ಬೆಂಕಿಗಾಹುತಿ

ಗಣೇಶಪ್ಪ ಹಳೇಮನಿ, ವಿಜಯಕುಮಾರ ಹಳೇಮನಿ ಮತ್ತು ಪರಶುರಾಮ ಹಳೇಮನಿ ಎಂಬ ರೈತರಿಗೆ ಸೇರಿದ‌ ಮೆಕ್ಕೆಜೋಳ ತೆನೆಗಳು ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಭಸ್ಮವಾಗಿವೆ. ಸುಮಾರು ಹದಿನೆಂಟು ಎಕರೆ ಜಮೀನಿನಲ್ಲಿ ಬೆಳೆದಿದ್ದ ಮೆಕ್ಕೆಜೋಳದ ತೆನೆಗಳು ಸುಟ್ಟು ಕರಕಲಾಗಿದ್ದು, ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಬ್ಯಾಡಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಓದಿ : ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ : ತಾಯಿ ಮಗ ಸ್ಥಳದಲ್ಲಿಯೇ ಸಾವು

ABOUT THE AUTHOR

...view details